ADVERTISEMENT

ನಾಲ್ಕಂಕಿಗೆ ಇಳಿದ ಕೊಬ್ಬರಿ ಬೆಲೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 21:45 IST
Last Updated 23 ಫೆಬ್ರುವರಿ 2023, 21:45 IST
   

ಹುಳಿಯಾರು: ಐದು ವರ್ಷದಿಂದ ಐದಂಕಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಕೊಬ್ಬರಿ ಬೆಲೆ ಗುರುವಾರ ಪಟ್ಟಣದ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹9,666ಕ್ಕೆ ಕುಸಿಯುವ ಮೂಲಕ ನಾಲ್ಕಂಕಿಗೆ ಇಳಿದಿದೆ.

ಆರು ವರ್ಷದ ಹಿಂದೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹7 ಸಾವಿರಕ್ಕೆ ಕುಸಿದಿತ್ತು. ಅದಾದ ನಂತರ ₹18 ಸಾವಿರದವರೆಗೂ ಏರಿಕೆಯಾಗಿ ತೆಂಗು ಬೆಳೆಗಾರರಲ್ಲಿ ಮಂದಹಾಸ ಮೂಡಿಸಿತ್ತು. ಕಳೆದ ವರ್ಷದಿಂದ ಬೆಲೆ ಕುಸಿಯುತ್ತಾ ₹11 ಸಾವಿರದಿಂದ ₹12 ಸಾವಿರ ಅಸುಪಾಸಿನಲ್ಲಿ ಸ್ಥಿರವಾಗಿತ್ತು. ಸದ್ಯ ₹10 ಸಾವಿರಕ್ಕಿಂತ ಕಡಿಮೆಯಾಗಿರುವುದು ತೆಂಗು ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT