ADVERTISEMENT

ಸಿಡಿಇ: ಕಡಿಮೆಯಾದ ಪ್ರವರ್ತಕರ ಪಾಲು

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:00 IST
Last Updated 22 ಜನವರಿ 2020, 20:00 IST
ಸಿಸಿಡಿ
ಸಿಸಿಡಿ   

ಬೆಂಗಳೂರು: ಕಾಫಿ ಡೇ ಎಂಟರ್‌ಪ್ರೈಸಿಸ್‌ನಲ್ಲಿನ (ಸಿಡಿಇ) ಪ್ರವರ್ತಕರ ಪಾಲು ಬಂಡವಾಳವು ಮೂರು ತಿಂಗಳಲ್ಲಿ ಒಂದು ಮೂರಾಂಶದಷ್ಟು ಕಡಿಮೆಯಾಗಿದೆ.

ಸಾಲ ಮರುಪಾವತಿ ಆಗದ ಕಾರಣಕ್ಕೆ, ‘ಸಿಡಿಇ’ಗೆ ಸಾಲ ನೀಡಿದ ಹಣಕಾಸು ಸಂಸ್ಥೆಗಳು ಸಾಲಕ್ಕೆ ಜಾಮೀನಿನ ರೂಪದಲ್ಲಿ ಅಡಮಾನ ಇರಿಸಿದ್ದ ಷೇರುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಇದರಿಂದಾಗಿ ಪ್ರವರ್ತಕರ ಪಾಲು ಕಡಿಮೆಯಾಗಿದೆ.

ಡಿಸೆಂಬರ್‌ ತಿಂಗಳಾಂತ್ಯಕ್ಕೆ ಪ್ರವರ್ತಕರ ಪಾಲು ಬಂಡವಾಳವು ಮೂರು ತಿಂಗಳ ಹಿಂದಿನ ಶೇ 25.35ಕ್ಕೆ ಹೋಲಿಸಿದರೆ ಶೇ 7.71ರಷ್ಟು ಕಡಿಮೆಯಾಗಿ ಶೇ 17.64ಕ್ಕೆ ಇಳಿದಿದೆ. ಆಗಸ್ಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಂಪನಿಯ ಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಹೆಸರಿನಲ್ಲಿ ಈಗಲೂ ಶೇ 13.41ರಷ್ಟು ಷೇರುಗಳು ಇವೆ. ಪ್ರವರ್ತಕರಿಗೆ ಸೇರಿದ ಶೇ 71.18 ಷೇರುಗಳ ಪೈಕಿ ಮೂರು ನಾಲ್ಕಾಂಶದಷ್ಟು ಷೇರುಗಳನ್ನು ಸಾಲಗಾರರ ಬಳಿ ಅಡಮಾನ ಇರಿಸಲಾಗಿದೆ. ಕಂಪನಿಯ ಒಟ್ಟಾರೆ ಸಾಲದ ಹೊರೆ ₹ 4,970 ಕೋಟಿಗಳಷ್ಟಿದೆ.

ADVERTISEMENT

ಕಂಪನಿಯು ಜೂನ್‌ ಮತ್ತು ಸೆಪ್ಟೆಂಬರ್‌ ತ್ರೈಮಾಸಿಕದ ಹಣಕಾಸು ಸಾಧನೆಗಳನ್ನು ಪ್ರಕಟಿಸದ ಕಾರಣಕ್ಕೆ ಫೆಬ್ರುವರಿ 3 ರಿಂದ ಷೇರುಪೇಟೆಯಲ್ಲಿ ಕಂಪನಿಯ ಷೇರು ವಹಿವಾಟಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಇದನ್ನು ತೆರವುಗೊಳಿಸಲು ಕಂಪನಿ ಪ್ರಯತ್ನಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.