ADVERTISEMENT

ಕಾಫಿ ಡೇ ನಷ್ಟ ₹ 18 ಕೋಟಿಗೆ ಇಳಿಕೆ

ಪಿಟಿಐ
Published 13 ಆಗಸ್ಟ್ 2022, 10:55 IST
Last Updated 13 ಆಗಸ್ಟ್ 2022, 10:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ (ಸಿಡಿಇಎಲ್‌) ನಷ್ಟವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 18 ಕೋಟಿಗೆ ಇಳಿಕೆ ಆಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ₹ 117 ಕೋಟಿ ನಷ್ಟ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಾರ್ಯಾಚರಣಾ ವರಮಾನ ₹ 81.52 ಕೋಟಿಯಿಂದ ₹ 210.49 ಕೋಟಿಗೆ ಎರಡು ಪಟ್ಟು ಏರಿಕೆ ಆಗಿದೆ. ಒಟ್ಟಾರೆ ವೆಚ್ಚವು ಶೇ 17.96ರಷ್ಟು ಹೆಚ್ಚಾಗಿದ್ದು ₹ 237.75 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ವೆಚ್ಚವು ₹ 201.54 ಕೋಟಿ ಇತ್ತು ಎಂದು ತಿಳಿಸಿದೆ.

ADVERTISEMENT

ಕಾಫಿ ಮತ್ತು ಅದಕ್ಕೆ ಸಂಬಂಧಿತ ವಹಿವಾಟುಗಳಿಂದ ಬಂದಿರುವ ವರಮಾನವು ₹ 67.16 ಕೋಟಿಯಿಂದ ₹ 189.63 ಕೋಟಿಗೆ ಏರಿಕೆ ಆಗಿದೆ. ಆತಿಥ್ಯ ಸೇವೆಗಳಿಂದ ಬಂದಿರುವ ವರಮಾನ ₹ 2.40 ಕೋಟಿಯಿಂದ ₹ 14.32 ಕೋಟಿಗೆ ಏರಿಕೆ ಕಂಡಿದೆ ಎಂದು ಹೇಳಿದೆ.

ಕೆಫೆ ಕಾಫಿ ಡೇ (ಸಿಸಿಡಿ) ವಹಿವಾಟು ನಡೆಸುವ ತನ್ನ ಅಂಗಸಂಸ್ಥೆ ಕಾಫಿ ಡೇ ಗ್ಲೋಬಲ್‌ನ ಫಲಿತಾಂಶವನ್ನೂ ಕಂಪನಿ ಪ್ರಕಟಿಸಿದೆ.ಕಾಫಿ ಡೇ ಗ್ಲೋಬಲ್‌ನ ಕಾರ್ಯಾಚರಣಾ ವರಮಾನ ₹ 189.63 ಕೋಟಿಗೆ ತಲುಪಿದೆ. ಹಿಂದಿನ ಬಾರಿ ₹ 67.16 ಕೊಟಿ ಇತ್ತು. ನಿವ್ವಳ ನಷ್ಟ ₹ 89.49 ಕೋಟಿ ಇದ್ದಿದ್ದು ₹ 11.72 ಕೋಟಿಗೆ ಇಳಿಕೆ ಆಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.