ನವದೆಹಲಿ: ಕಾರ್ಯಾಚರಣೆ ಸುಲಭಗೊಳಿಸಲು ಮತ್ತು ಕಾರ್ಪೊರೇಟ್ ಕಾರ್ಯವೈಖರಿಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸಲು ಹೊರಟಿರುವುದರಿಂದ ಅಂದಾಜು 3,500 ಉದ್ಯೋಗಿಗಳ ಮೇಲೆ ಪರಿಣಾಮ ಆಗಲಿದೆ ಎಂದು ಐ.ಟಿ. ಸೇವೆಗಳ ಕಂಪನಿ ಕಾಗ್ನಿಜಂಟ್ ಹೇಳಿದೆ.
2023ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಸಿಬ್ಬಂದಿ ಸಂಖ್ಯೆ 3.51 ಲಕ್ಷ. 2022ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಸಿಬ್ಬಂದಿ ಸಂಖ್ಯೆ 3,800ರಷ್ಟು ಕಡಿಮೆ ಆಗಿದೆ. 2022ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಸಿಬ್ಬಂದಿ ಸಂಖ್ಯೆಯಲ್ಲಿ 11,110 ಏರಿಕೆ ಕಂಡಿದೆ.
ಕಂಪನಿಯು ಜನವರಿಯಿಂದ–ಡಿಸೆಂಬರ್ ಅವಧಿಯನ್ನು ಹಣಕಾಸು ವರ್ಷವಾಗಿ ಪರಿಗಣಿಸುತ್ತದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ವರಮಾನ ಶೇ 3ರಷ್ಟು ಹೆಚ್ಚಾಗಿದ್ದು, ₹4,756 ಕೋಟಿಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.