ADVERTISEMENT

ಕಾಗ್ನಿಜೆಂಟ್‌ ಲಾಭ ಶೇ 20ರಷ್ಟು ಇಳಿಕೆ

ಪಿಟಿಐ
Published 4 ಫೆಬ್ರುವರಿ 2021, 11:40 IST
Last Updated 4 ಫೆಬ್ರುವರಿ 2021, 11:40 IST
ಕಾಗ್ನಿಜೆಂಟ್‌
ಕಾಗ್ನಿಜೆಂಟ್‌   

ನವದೆಹಲಿ: ಪ್ರಮುಖ ಐ.ಟಿ. ಕಂಪನಿಯಾದ ಕಾಗ್ನಿಜೆಂಟ್‌ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 2,303 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿಯು ₹ 2,883 ಕೋಟಿ ನಿವ್ವಳ ಲಾಭ ಗಳಿಸಿತ್ತು. ನಿವ್ವಳ ಲಾಭದಲ್ಲಿ ಶೇಕಡ 20ರಷ್ಟು ಇಳಿಕೆಯಾಗಿದೆ.

ವರಮಾನದಲ್ಲಿ ಶೇ 2.3ರಷ್ಟು ಇಳಿಕೆ ಆಗಿದ್ದು, ₹ 31,244 ಕೋಟಿಗಳಿಂದ ₹ 30,514 ಕೋಟಿಗಳಿಗೆ ತಗ್ಗಿದೆ ಎಂದು ತಿಳಿಸಿದೆ. 2021ರಲ್ಲಿ ವರಮಾನದ ಬೆಳವಣಿಗೆ ಶೇ 5.5ರಿಂದ ಶೇ 8.5ರ ಆಸುಪಾಸಿನಲ್ಲಿ ಇರಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT