ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಕ್ರಿಪ್ಟೊ ಟ್ರೇಡಿಂಗ್ ವೇದಿಕೆ ಕಾಯಿನ್ ಸ್ವಿಚ್ ತನ್ನ ಪ್ರೊ ಪ್ಲಾಟ್‌ಫಾರಂನಲ್ಲಿ ಕ್ರಿಪ್ಟೊ ಫ್ಯೂಚರ್ಸ್ ವಹಿವಾಟು ನಡೆಸುವ ಅವಕಾಶ ಕಲ್ಪಿಸಿದೆ.
‘ಇದು ಆಯ್ದ ಬಳಕೆದಾರರಿಗೆ ವೈವಿಧ್ಯಮಯ ಟ್ರೇಡಿಂಗ್ ಅನುಭವ ನೀಡಲಿದ್ದು, ಟ್ರೇಡಿಂಗ್ ಸಾಮರ್ಥ್ಯವನ್ನು 25 ಪಟ್ಟು ಗರಿಷ್ಠಗಳಿಸಿಕೊಳ್ಳಲು ನೆರವಾಗುತ್ತದೆ. ಬಳಕೆದಾರರು ಬಿಟಿಸಿ, ಇಟಿಎಚ್, ಮ್ಯಾಟಿಕ್, ಎಕ್ಸ್.ಆರ್.ಪಿ ಇತ್ಯಾದಿ ಒಳಗೊಂಡು 350ಕ್ಕೂ ಹೆಚ್ಚು ಕಾಂಟ್ರಾಕ್ಟ್‌ಗಳಲ್ಲಿ ವಹಿವಾಟು ನಡೆಸಬಹುದಾಗಿದೆ’ ಎಂದು ಕಾಯಿನ್ ಸ್ವಿಚ್‌ನ ವ್ಯಾಪಾರ ವಿಭಾಗದ ಮುಖ್ಯಸ್ಥ ಬಾಲಾಜಿ ಶ್ರೀಹರಿ ಹೇಳಿದ್ದಾರೆ.
‘ಕಾಯಿನ್ ಸ್ವಿಚ್ ಫ್ಯೂಚರ್ಸ್ ಪ್ರಾರಂಭವು ನಮ್ಮ ಬಳಕೆದಾರರಿಗೆ ಸಮಗ್ರ ಕ್ರಿಪ್ಟೊ ಮತ್ತು ಟ್ರೇಡಿಂಗ್ ಆಯ್ಕೆ ನೀಡಲಿದೆ. ಲೆವೆರೇಜ್ಡ್ ಫ್ಯೂಚರ್ಸ್ ಕಾಂಟ್ರಾಕ್ಟ್‌ಗಳನ್ನು ಒದಗಿಸುವ ಮೂಲಕ ನಾವು ಚಲನಶೀಲ ಕ್ರಿಪ್ಟೊ ಮಾರುಕಟ್ಟೆಯಲ್ಲಿ ಬೆಲೆಯ ಚಲನೆಗಳನ್ನು ಬಳಸಿಕೊಳ್ಳುವ ಅತ್ಯಾಧುನಿಕ ಟ್ರೇಡರ್‌ಗಳ ಅಗತ್ಯ ಪೂರೈಸುವ ಗುರಿ ಹೊಂದಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.