- ಸರಳಾ ಸಾತ್‌ಪುತೆ ಬೆಂಗಳೂರು
ಒಂದು ಕಂಪನಿಯಲ್ಲಿ 4 ವರ್ಷ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಈಗ ರಾಜೀನಾಮೆ ನೀಡಿದರೆ ಗ್ರಾಚ್ಯುಟಿ ಸಿಗಬಹುದೆ?
ಉತ್ತರ: ನೀವು ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿ ಸೇರುವುದಾದಲ್ಲಿ ಮಾತ್ರ ರಾಜೀನಾಮೆ ಕೊಡುವುದು ಲೇಸು. ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಕೆಲಸ ಬೇಕೆಂದರೆ ಸಿಗಲಾರದು. Industrial dispute act ಹಾಗೂ Payment of Gratuity Act ಪ್ರಕಾರ ಓರ್ವ ವ್ಯಕ್ತಿ 4 ವರ್ಷ 10 ತಿಂಗಳು 11 ದಿನ ಕೆಲಸ ಮಾಡಿದ್ದರೆ ಈ ಅವಧಿ 5 ವರ್ಷಗಳೆಂದು ಪರಿಗಣಿಸಿ ಸೆಕ್ಷನ್ 4(2) ಆಧಾರದ ಮೇಲೆ ಗ್ರಾಚ್ಯುಟಿ ಪಡೆಯಬಹುದು. Surendra Kumar vs Central Govt, Industrial Tribunal (1080) (4) S.C.C 433 Supreme court Judgment ಕೂಡಾ ಇದನ್ನೇ ಹೇಳುತ್ತದೆ. ಆದರೆ, ನೀವು 5 ವರ್ಷ ಸೇವೆ ಸಲ್ಲಿಸುವುದೇ ಲೇಸು.
– ಮಧುಕರ ಚಿಪ್ಲಿ, ಗದಗ
ನೀವು ₹ 40 ಸಾವಿರ Standard Deduction ಪಿಂಚಣಿದಾರರಿಗೆ ಈ ಆರ್ಥಿಕ ವರ್ಷದಿಂದ ಲಭಿಸಿರುವುದಾಗಿ ಸತ್ಯನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ್ದೀರಿ. ಈ ಸವಲತ್ತು, ಸಂಬಳ ಪಡೆಯುವವರಿಗೂ ದೊರೆಯುವುದೇ?
ಉತ್ತರ: ಓರ್ವ ನೌಕರ, ತನ್ನ ಸಂಬಳದಲ್ಲಿ Transport ಹಾಗೂ Medical Reimbursement Allowance ಪಡೆದಿರುವಲ್ಲಿ ಮಾತ್ರ ಅಂತಹ ನೌಕರರು Standard Deduction ₹ 40 ಸಾವಿರವನ್ನು ಈ ಆರ್ಥಿಕ ವರ್ಷದಿಂದ ಪಡೆಯಬಹುದಾಗಿದೆ.
Deduction of ₹ 40,000 in place of Existing 19,200 for Transport and 15,000 for Medical Reimbursement is allowed as stranded deduction for all salaried class.
– ವಿಜಯ ಕುಲಕರ್ಣಿ, ಬೆಳಗಾವಿ
ನಾನು ಬ್ಯಾಂಕ್‌ನಿಂದ ಗೃಹ ಸಾಲ ಪಡೆದಿದ್ದೇನೆ. ಮನೆ ಪೂರ್ಣಗೊಳ್ಳಲಿಲ್ಲವಾದರೂ ಬ್ಯಾಂಕ್‌ನಲ್ಲಿ ಸಾಲದ ಕಂತು ಬಡ್ಡಿ ಮುರಿಯಲು ಪ್ರಾರಂಭಿಸಿದ್ದಾರೆ. ನಾನು ಬಡ್ಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಬಹುದೇ?
ಉತ್ತರ: ಸೆಕ್ಷನ್ 80 ಸಿ ಆಧಾರದ ಮೇಲೆ ಅಸಲಿಗೆ ತುಂಬಿದ ಸಾಲದ ಕಂತುಗಳ ಮೇಲೆ ಮನೆ ಪೂರ್ಣಗೊಳ್ಳುವ ಮೊದಲು ತೆರಿಗೆ ವಿನಾಯ್ತಿ ಪಡೆಯವಂತಿಲ್ಲ. ಸೆಕ್ಷನ್ 24 (ಬಿ) ಆಧಾರದ ಮೇಲೆ, ಸಾಲದ ಬಡ್ಡಿ ಮನೆ ಪೂರ್ಣಗೊಳ್ಳುವ ಮೊದಲು ಕಟ್ಟಿರುವ ಮೊತ್ತ 5 ಸಮಾನ ಕಂತುಗಳಲ್ಲಿ ಮುಂದಿನ 5 ವರ್ಷ ಐ.ಟಿ ರಿಟರ್ನ್ ತುಂಬುವಾಗ ವಿನಾಯ್ತಿ ಪಡೆಯಬಹುದು.
– ಹೆಸರು ಬೇಡ
ಅನುದಾನಿತಶಾಲಾಶಿಕ್ಷಕ. 2021 ಮಾರ್ಚ್‌ನಲ್ಲಿ ನಿವೃತ್ತಿ. ಇಬ್ಬರು ಹೆಣ್ಣು ಮಕ್ಕಳು. ಹೆಂಡತಿ ಹೆಸರಿನಲ್ಲಿ₹ 15000, 3 ವರ್ಷಗಳ ಅವಧಿಗೆ RD ಮಾಡಿದ್ದೇನೆ. ತೆರಿಗೆ ಬಾರದಂತೆ ಮಾಡಲು ವಿಧಾನ ತಿಳಿಸಿ.
ಉತ್ತರ: ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಕರಾದಲ್ಲಿ ಅವರ ಹೆಸರಿನಲ್ಲಿ₹ 15,000 ಆರ್.ಡಿ ಮಾಡಿ. ಈ ಮಾರ್ಗದಲ್ಲಿ ನಿಮಗೆ ತೆರಿಗೆ ಬರುವುದಿಲ್ಲ. ಅವರು ಅಪ್ರಾಪ್ತ ವಯಸ್ಕರಾದರೆ ಈ ಮಾರ್ಗ ಪ್ರಯೋಜನಕಾರಿಯಾಗಲಾರದು. ಏನೇ ಇರಲಿ ತೆರಿಗೆ ಬಿಟ್ಟು₹ 15000 ಆರ್.ಡಿ. ಮಾಡುವುದನ್ನು ನಿಲ್ಲಿಸಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.