ADVERTISEMENT

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ₹36 ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 11:16 IST
Last Updated 1 ಆಗಸ್ಟ್ 2022, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಸೋಮವಾರ ₹ 36 ಇಳಿಕೆ ಮಾಡಲಾಗಿದೆ.

ಇದರೊಂದಿಗೆ ವಾಣಿಜ್ಯ ಬಳಕೆಯ 19 ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ ದರ ₹ 2012.50ಕ್ಕೆ ಬದಲಾಗಿ ₹ 1,976 ಆಗಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.

ಎಟಿಎಫ್‌ ದರವನ್ನು ಪ್ರತಿ ಕಿಲೋ ಲೀಟರಿಗೆ ₹ 16,232ರಷ್ಟು (ಶೇಕಡ 12) ಇಳಿಕೆ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಮಾರಾಟ ದರವು ಕಿಲೋ ಲೀಟರಿಗೆ ₹ 1,21,915ಕ್ಕೆ ಇಳಿಕೆ ಆಗಿದೆ. (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್).

ADVERTISEMENT

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಜುಲೈ 1ರಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹ 198 ಕಡಿತ ಮಾಡಿದ್ದವು. ಅದಕ್ಕೂ ಮೊದಲು ಜೂನ್ 1ರಂದು ₹ 135 ದರ ಇಳಿಕೆ ಮಾಡಲಾಗಿತ್ತು.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಜುಲೈ 6ರಂದು₹50 ಹೆಚ್ಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.