ನವದೆಹಲಿ: ವಾಣಿಜ್ಯ ಬಳಕೆಯ 19.2 ಕೆ.ಜಿ ತೂಕದ ಸಿಲಿಂಡರ್ ದರವು ₹62 ಏರಿಕೆಯಾಗಿದ್ದು, ಸದ್ಯ ₹1,802 ಆಗಿದೆ.
ಸತತ ನಾಲ್ಕು ತಿಂಗಳಿಂದ ಒಟ್ಟು ₹156 ಹೆಚ್ಚಳವಾಗಿದೆ. ಮುಂಬೈನಲ್ಲಿ ಸಿಲಿಂಡರ್ ದರ ₹1,754 ಇದ್ದರೆ, ಕೋಲ್ಕತ್ತದಲ್ಲಿ ₹1,911 ಮತ್ತು ಚೆನ್ನೈನಲ್ಲಿ ₹1,964 ಆಗಿದೆ.
ಗೃಹ ಬಳಕೆಗೆ ಬಳಸುವ 14.2 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ ಇದರ ದರ ₹803 ಇದೆ.
ವಿಮಾನ ಇಂಧನ ದರ ಏರಿಕೆ: ವಿಮಾನದಲ್ಲಿ ಬಳಸುವ ಇಂಧನ ದರವನ್ನು ಶೇ 3ರಷ್ಟು ಏರಿಕೆ ಮಾಡಲಾಗಿದೆ.
ದೆಹಲಿಯಲ್ಲಿ ಪ್ರತಿ ಕಿಲೋಲೀಟರ್‌ಗೆ (ಒಂದು ಸಾವಿರ ಲೀಟರ್) ₹2,941 ಏರಿಕೆಯಾಗಿದ್ದು, ₹90,538 ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಳಿಸಿವೆ.
ವಿಮಾನ ಇಂಧನ ದರ (ಎಟಿಎಫ್) ಸೆಪ್ಟೆಂಬರ್‌ನಲ್ಲಿ ₹4,495 ಮತ್ತು ಅಕ್ಟೋಬರ್‌ನಲ್ಲಿ ₹5,883 ಕಡಿತವಾಗಿತ್ತು. ಪ್ರಸ್ತುತ ಎಟಿಎಫ್ ದರ ಮುಂಬೈನಲ್ಲಿ ₹84,642 ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳು ದರ ಪರಿಷ್ಕರಣೆ ಮಾಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.