ನವದೆಹಲಿ: ಎಲ್ಲ ತೆರಿಗೆದಾರರಿಗೂ ಏಕರೂಪದ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ ಅರ್ಜಿಯನ್ನು ಜಾರಿಗೆ ತರಲು ಹಣಕಾಸು ಸಚಿವಾಲಯ ಮುಂದಾಗಿದೆ.
ಹೊಸ ಅರ್ಜಿ ನಮೂನೆಯ ಕುರಿತು ಡಿಸೆಂಬರ್ 15ರ ಒಳಗಾಗಿ ಸಾರ್ವಜನಿಕ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟ) ಹೇಳಿದೆ.
ಟ್ರಸ್ಟ್‌ಗಳು ಮತ್ತು ಎನ್‌ಜಿಒಗಳನ್ನು ಹೊರತುಪಡಿಸಿ ಉಳಿದೆಲ್ಲಾ ತೆರಿಗೆದಾರರು ಪ್ರಸ್ತಾವಿತ ಐಟಿಆರ್ ಅರ್ಜಿಯ ಮೂಲಕ ರಿಟರ್ನ್ಸ್ ಸಲ್ಲಿಸಬಹುದಾಗಿದೆ ಎಂದು ಹೇಳಿದೆ.
ಡಿಜಿಟಲ್ ರೂಪದ ಆಸ್ತಿಗಳ ಬಗ್ಗೆ ಮಾಹಿತಿ ನೀಡಲು ಈ ಅರ್ಜಿ ನಮೂನೆಯಲ್ಲಿ ಪ್ರತ್ಯೇಕ ವಿಭಾಗವನ್ನು ನೀಡಲು ನಿರ್ಧರಿಸಲಾಗಿದೆ. ಸದ್ಯ, ವಿವಿಧ ವಿಭಾಗಗಳ ತೆರಿಗೆದಾರರರಿಗೆ 7 ಬಗೆಯ ಐಟಿಆರ್ ಅರ್ಜಿಗಳು ಬಳಕೆಯಲ್ಲಿವೆ.
ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ಗಾತ್ರದ ತೆರಿಗೆದಾರರು ಐಟಿಆರ್ ಫಾರಂ 1 (ಸಹಜ್) ಮತ್ತು ಐಟಿಆರ್ ಫಾರಂ 4 (ಸುಗಮ್) ಬಳಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.