ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಲಸಿಕೆಗೆ ₹ 250ರ ಮಿತಿ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ವಿರೋಧಿಸಿದ್ದಾರೆ.
‘ಲಸಿಕೆ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಬದಲು ನಾವು ಅದನ್ನು ಹೊಸಕಿ ಹಾಕುತ್ತಿದ್ದೇವೆ’ ಎಂದು ಕಿರಣ್ ಅವರು ಟ್ವೀಟ್ ಮಾಡಿದ್ದಾರೆ. ‘ಲಸಿಕೆಗೆ ನಿಗದಿ ಮಾಡಿರುವ ಬೆಲೆಯು ತೀರಾ ಕಡಿಮೆ. ಲಸಿಕೆ ಕಂಪನಿಗಳಿಗೆ ಮೋಸಹೋದಂತಹ ಅನುಭವ ಆಗುತ್ತಿದೆ’ ಎಂದು ಕೂಡ ಅವರು ಹೇಳಿದ್ದಾರೆ.
ಸರ್ಕಾರ ನಿಗದಿ ಮಾಡಿರುವ ₹ 250ರಲ್ಲಿ, ಒಂದು ಡೋಸ್ ಲಸಿಕೆಯ ವೆಚ್ಚ ₹ 150 ಹಾಗೂ ಸೇವಾ ಶುಲ್ಕ ₹ 100 ಸೇರಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.