ADVERTISEMENT

ರಿಲಯನ್ಸ್‌–ಡಿಸ್ನಿ ವಿಲೀನಕ್ಕೆ ಸಿಐಐ ಒಪ್ಪಿಗೆ

ಪಿಟಿಐ
Published 28 ಆಗಸ್ಟ್ 2024, 15:54 IST
Last Updated 28 ಆಗಸ್ಟ್ 2024, 15:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರಿಸ್‌ ಮತ್ತು ವಾಲ್ಟ್‌ ಡಿಸ್ನಿ ಲಿಮಿಟೆಡ್‌ ಆಸ್ತಿಗಳ ವಿಲೀನಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬುಧವಾರ ಒಪ್ಪಿಗೆ ನೀಡಿದೆ.

ಆರು ತಿಂಗಳ ಹಿಂದೆ ₹70 ಸಾವಿರ ಕೋಟಿ ಮೊತ್ತದ ಜಂಟಿ ಉದ್ಯಮ ಒಪ್ಪಂದಕ್ಕೆ ಈ ಎರಡು ಕಂಪನಿಗಳು ಸಹಿ ಹಾಕಿದ್ದವು. 

ರಿಲಯನ್ಸ್ ಇಂಡಸ್ಟ್ರಿಸ್‌ ಲಿಮಿಟೆಡ್‌, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್, ಡಿಜಿಟಲ್‌ ಮೀಡಿಯಾ ಲಿಮಿಟೆಡ್‌, ಸ್ಟಾರ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಮತ್ತು ಸ್ಟಾರ್‌ ಟೆಲಿವಿಷನ್‌ ಪ್ರೊಡಕ್ಷನ್ಸ್‌ ಲಿಮಿಟೆಡ್‌ ಒಗ್ಗೂಡಲಿವೆ. ಇದು ಕೆಲವು ಸ್ವಯಂಪ್ರೇರಿತ ಮಾರ್ಪಾಡುಗಳಿಗೆ ಒಳಪಟ್ಟಿದೆ ಎಂದು ಸಿಸಿಐ ‘ಎಕ್ಸ್‌’ನಲ್ಲಿ ತಿಳಿಸಿದೆ.

ADVERTISEMENT

ಒಪ್ಪಂದದ ಪ್ರಕಾರ ಉದ್ಯಮಿ ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಇಂಡಸ್ಟ್ರಿಸ್‌ ಮತ್ತು ಅದರ ಅಂಗಸಂಸ್ಥೆಗಳು ಶೇ 63.16ರಷ್ಟು ಮತ್ತು ವಾಲ್ಟ್‌ ಡಿಸ್ನಿ ಶೇ 36.84ರಷ್ಟು ಷೇರುಗಳ ಮೇಲೆ ಒಡೆತನ ಹೊಂದಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.