ಕೋಲ್ಕತ್ತ: ‘ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ಅಮೆರಿಕದ ಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಆಯೋಗವು ತನಿಖೆಗೆ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಅಧ್ಯಕ್ಷೆ ರವನೀತ್ ಕೌರ್ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ಪರ್ಧಾತ್ಮಕ ಕಾಯ್ದೆಯಡಿ ರೂಪಿಸಿರುವ ನಿಯಮಾವಳಿಗಳ ಅನ್ವಯ ಆಯೋಗವು ಕಾರ್ಯ ನಿರ್ವಹಿಸಲಿದೆ. ಸುಸ್ಥಿರ ಸ್ಪರ್ಧೆಗೆ ಒತ್ತು ನೀಡುವುದು ಆಯೋಗದ ಗುರಿ. ಕಾಯ್ದೆಯಡಿ ಒಳಪಡುವ ವಿಷಯವಿದ್ದರೆ ತನಿಖೆಗೆ ಕ್ರಮವಹಿಸಲಿದೆ’ ಎಂದು ಹೇಳಿದರು.
‘ಅದಾನಿ ವಿರುದ್ಧ ದಾಖಲಾಗಿರುವ ಪ್ರಕರಣ ಯಾವ ಸ್ವರೂಪದ್ದು ಎಂಬುದು ನನಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದರು.
‘ಕಾಯ್ದೆಯಡಿ ಬರುವ ವಿಷಯಗಳ ಬಗ್ಗೆ ಆಯೋಗದ ಮುಂದೆ ಸಲ್ಲಿಕೆಯಾಗುವ ಮಾಹಿತಿ ಆಧರಿಸಿ ನಿಯಮಾವಳಿ ಅನ್ವಯವೇ ಕ್ರಮಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.