ನ್ಯೂಯಾರ್ಕ್: ಆ್ಯಕ್ಸೆಂಚರ್ ಕಂಪನಿಯು 18 ತಿಂಗಳಿನಲ್ಲಿ 19 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿದೆ. ಇದು ಕಂಪನಿ ಹೊಂದಿರುವ ಒಟ್ಟು ಸಿಬ್ಬಂದಿಯಲ್ಲಿ ಶೇಕಡ 2.5ರಷ್ಟು.
ವೆಚ್ಚ ಕಡಿಮೆ ಮಾಡುವ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ.
ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವುದಕ್ಕೆ ಒಟ್ಟಾರೆ ₹ 12,300 ಕೋಟಿ ವೆಚ್ಚವಾಗಲಿದೆ ಎಂದು ಕಂಪನಿಯು ಅಮೆರಿಕದ ಸೆಕ್ಯುರಿಟಿ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್‌ಗೆ ಮಾಹಿತಿ ನೀಡಿದೆ.
19 ಸಾವಿರದಲ್ಲಿ ಅರ್ಧದಷ್ಟು ಉದ್ಯೋಗ ಕಡಿತವು ಆಡಳಿತಾತ್ಮಕ ವಿಭಾಗದಲ್ಲಿ ಆಗಲಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ವಾರ್ಷಿಕ ವರದಿಯ ಪ್ರಕಾರ, 2022ರಲ್ಲಿ ಒಟ್ಟು 7.21 ಲಕ್ಷ ಸಿಬ್ಬಂದಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.