ADVERTISEMENT

ಶಂಕರ್‌ ಐಎಎಸ್‌ ಅಕಾಡೆಮಿಗೆ ₹5 ಲಕ್ಷ ದಂಡ

ಪಿಟಿಐ
Published 1 ಸೆಪ್ಟೆಂಬರ್ 2024, 13:01 IST
Last Updated 1 ಸೆಪ್ಟೆಂಬರ್ 2024, 13:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಆರೋಪದ ಮೇರೆಗೆ, ದೆಹಲಿಯ ಶಂಕರ್ ಐಎಎಸ್‌ ಅಕಾಡೆಮಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ₹5 ಲಕ್ಷ ದಂಡ ವಿಧಿಸಿದೆ.

2022ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಸಾಧಿಸಿ, ಆಯ್ಕೆಯಾದ 933 ಅಭ್ಯರ್ಥಿಗಳ ಪೈಕಿ 336 ಅಭ್ಯರ್ಥಿಗಳು ಶಂಕರ್‌ ಐಎಎಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಮೊದಲ 100 ರ‍್ಯಾಂಕ್‌ ಪಡೆದವರನ್ನು 40 ಅಭ್ಯರ್ಥಿಗಳು ನಮ್ಮ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದಾರೆ. ಇಡೀ ದೇಶದಲ್ಲಿಯೇ ನಮ್ಮ ಸಂಸ್ಥೆಯು ಅತ್ಯುತ್ತಮವಾಗಿದೆ ಎಂದು ಜಾಹೀರಾತು ಪ್ರಕಟಿಸಲಾಗಿತ್ತು.

ಈ ಕುರಿತು ತನಿಖೆ ನಡೆಸಿದ ಸಿಸಿಪಿಎ, 336 ಅಭ್ಯರ್ಥಿಗಳ ಪೈಕಿ 221 ಅಭ್ಯರ್ಥಿಗಳು ಮಾತ್ರ ಉಚಿತ ಸಂದರ್ಶನ, ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಉಳಿದವರು ಅಲ್ಪಾವಧಿ ಅಥವಾ ನಿರ್ದಿಷ್ಟ ಪರೀಕ್ಷೆಗೆ ಮಾತ್ರ ಭಾಗವಹಿಸಿದ್ದಾರೆ. ಉದ್ದೇಶಪೂರ್ವಕವಾಗಿ ಸಂಸ್ಥೆಯು ಈ ಮಾಹಿತಿಯನ್ನು ತಿರುಚಿದೆ ಎಂದು ಹೇಳಿದೆ. 

ADVERTISEMENT

‘ತರಬೇತಿ ಸಂಸ್ಥೆಗಳು ನೀಡುವ ದಾರಿ ತಪ್ಪಿಸುವ ಮಾಹಿತಿಗೆ ಕಡಿವಾಣ ಹಾಕಲು ಹಾಗೂ ಗ್ರಾಹಕರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಿಸಿಪಿಎ ಮುಖ್ಯ ಆಯುಕ್ತೆ ನಿಧಿ ಖರೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.