ADVERTISEMENT

ವಾಹನ ಉದ್ಯಮಕ್ಕೆ ಕಾದಿರುವ ಸಂಕಷ್ಟದ ದಿನಗಳು

ಪಿಟಿಐ
Published 19 ಮಾರ್ಚ್ 2020, 20:07 IST
Last Updated 19 ಮಾರ್ಚ್ 2020, 20:07 IST
ಕಾರ್‌ ತಯಾರಿಕೆ
ಕಾರ್‌ ತಯಾರಿಕೆ   

ನವದೆಹಲಿ: ಕೊರೊನಾ–2ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ದೇಶಿ ವಾಹನ ತಯಾರಿಕೆ ಮೇಲಿನ ಪ್ರತಿಕೂಲ ಪರಿಣಾಮವು ಇನ್ನೂ ಕೆಲ ಕಾಲ ಮುಂದುವರೆಯಲಿದೆ ಎಂದು ಇಂಡಿಯಾ ರೇಟಿಂಗ್‌ ಆ್ಯಂಡ್‌ ರಿಸರ್ಚ್‌ (ಇಂಡ್‌–ರೇ) ಅಂದಾಜಿಸಿದೆ.

ಕೊರಾನಾ ಪಿಡುಗಿನ ಕೇಂದ್ರ ಸ್ಥಾನವಾಗಿರುವ ಚೀನಾದ ವುಹಾನ್‌ ನಗರವು ವಾಹನ ಮತ್ತು ಬಿಡಿಭಾಗಗಳನ್ನು ತಯಾರಿಸುವ ಪ್ರಮುಖ ನೆಲೆಯಾಗಿದ್ದು ಸದ್ಯಕ್ಕೆ ಅಲ್ಲಿನ ಕೈಗಾರಿಕಾ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿವೆ.

ವೈರಸ್‌ ಪಿಡುಗು ಹಬ್ಬುತ್ತಿರುವುದು ಇದೇ ಬಗೆಯಲ್ಲಿ ಇನ್ನೂ ಎರಡು ತಿಂಗಳು ಮುಂದುವರೆದರೆ ದೇಶಿ ವಾಹನ ಉದ್ದಿಮೆಯು ಬರೀ ಪೂರೈಕೆ ಸಮಸ್ಯೆಯಷ್ಟೇ ಅಲ್ಲದೇ, ಬೇಡಿಕೆ ಹಾಗೂ ರಫ್ತು ಕುಸಿತದ ಪ್ರತಿಕೂಲತೆಯನ್ನೂ ಎದುರಿಸಬೇಕಾಗುತ್ತದೆ.

ADVERTISEMENT

ವಾಹನ ತಯಾರಿಕೆಯ ಮತ್ತು ಪೂರಕ ಉದ್ದಿಮೆಗಳು ಶೇ 27ರಷ್ಟು ಪ್ರಮುಖ ಬಿಡಿಭಾಗಗಳ ಅಗತ್ಯಗಳಿಗಾಗಿ ಚೀನಾವನ್ನೇ ನೆಚ್ಚಿಕೊಂಡಿವೆ. ಬಿಡಿಭಾಗ ಪೂರೈಕೆಯಲ್ಲಿನ ಕೊರತೆಯು ಈ ವಹಿವಾಟಿನಲ್ಲಿ ತೊಡಗಿರುವ ಉದ್ದಿಮೆಗಳ ಹಣಕಾಸು ಪರಿಸ್ಥಿತಿಯನ್ನು ಬಿಗಡಾಯಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.