ADVERTISEMENT

ಕೋವಿಡ್–19: ಲಸಿಕೆ ವೆಚ್ಚ ಭರಿಸಲು ಮುಂದಾದ ಕಂಪನಿಗಳು

ಮಹೇಶ ಕುಲಕರ್ಣಿ
Published 12 ಮಾರ್ಚ್ 2021, 19:30 IST
Last Updated 12 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೋವಿಡ್–19 ಲಸಿಕೆಯ ವೆಚ್ಚವನ್ನು ಪಾವತಿಸಲು ಹಲವು ಕಂಪನಿಗಳು ಮುಂದಾಗಿವೆ.

45 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ, ಆರೋಗ್ಯಕ್ಕೆ ಸಂಬಂಧಿಸಿದಂತೆ ಬೇರೆ ಸಮಸ್ಯೆಗಳನ್ನೂ ಎದುರಿಸುತ್ತಿರುವ ತಮ್ಮ ಸಿಬ್ಬಂದಿಯ ಹಾಗೂ ಅವರ ಕುಟುಂಬದ ಸದಸ್ಯರ ಲಸಿಕೆಯ ವೆಚ್ಚವನ್ನು ತಾವೇ ಭರಿಸುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌, ಟಿವಿಎಸ್‌ ಸಮೂಹ, ಆ್ಯಕ್ಸೆಂಚರ್, ಕಾಗ್ನಿಸೆಂಟ್, ಇನ್ಫೊಸಿಸ್‌, ಮಿಂತ್ರಾ ಮತ್ತು ಫ್ಲಿಪ್‌ಕಾರ್ಟ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಕಂಪನಿಗಳು ಘೋಷಿಸಿವೆ.

‘ಭಾರತದಲ್ಲಿ ಆರು ಲಕ್ಷಕ್ಕೂ ಹೆಚ್ಚಿನ ಜನರ ಲಸಿಕೆ ವೆಚ್ಚವನ್ನು ನಾವೇ ಭರಿಸಲು ತೀರ್ಮಾನಿಸಿದ್ದೇವೆ. ಈ ಆರು ಲಕ್ಷ ಜನರಲ್ಲಿ ನಮ್ಮ 2 ಲಕ್ಷ ಜನ ಪೂರ್ಣಾವಧಿ ಸಿಬ್ಬಂದಿ ಮತ್ತು ಅವರ ಅವಲಂಬಿತರು ಕೂಡ ಸೇರಿದ್ದಾರೆ. ಹಾಗೆಯೇ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರ ಲಸಿಕೆಯ ವೆಚ್ಚವನ್ನೂ ಭರಿಸಲಾಗುವುದು’ ಎಂದು ಕಾಗ್ನಿಸೆಂಟ್ ಇಂಡಿಯಾ ಕಂಪನಿಯ ಅಧ್ಯಕ್ಷ ರಾಜೇಶ್ ನಂಬಿಯಾರ್ ಹೇಳಿದ್ದಾರೆ.

ADVERTISEMENT

ತನ್ನ ಸಿಬ್ಬಂದಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಲಸಿಕೆಯನ್ನು ನಿಯಮಗಳಿಗೆ ಅನುಸಾರವಾಗಿ ಒದಗಿಸಲು ಆರೋಗ್ಯ ಸೇವೆ ನೀಡುವವರ ಜೊತೆ ಒಪ್ಪಂದ ಮಾಡಿಕೊಳ್ಳಲು ಭಾರತದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿಯಾದ ಇನ್ಫೊಸಿಸ್‌ ಮುಂದಾಗಿದೆ.

ತನ್ನಲ್ಲಿ ಕೆಲಸ ಮಾಡುವ ಒಂದು ಲಕ್ಷ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರ ಲಸಿಕೆಯ ವೆಚ್ಚವನ್ನು ತಾನೇ ಭರಿಸುವುದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.