ADVERTISEMENT

ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 9:31 IST
Last Updated 20 ಸೆಪ್ಟೆಂಬರ್ 2019, 9:31 IST
ಜಿಎಸ್‌ಟಿ ಸಭೆ
ಜಿಎಸ್‌ಟಿ ಸಭೆ   

ನವದೆಹಲಿ: ದೇಶದಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಡೆಯಲು ಕೇಂದ್ರ ಸರ್ಕಾರವು ಹಲವು ಕ್ರಮಗಳಿಗೆ ಮುಂದಾಗಿದ್ದು ದೇಶಿಯ ಹಾಗೂ ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳ ಮೇಲಿನಕಾರ್ಪೊರೇಟ್‌ ತೆರಿಗೆಯನ್ನುಕಡಿತ ಮಾಡಲಾಗುವುದುಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಘೋಷಣೆ ಮಾಡಿದ್ದಾರೆ.

ದೇಶಿಯ ಕಂಪನಿಗಳು ಹಾಗೂ ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳಿಗೆ ಇದು ಅನ್ವಯಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಶೇ 30 ರಷ್ಟಿದ್ದ ಕಾರ್ಪೊರೇಟ್‌ ತೆರಿಗೆಯನ್ನು ಶೇ 25.2ಕ್ಕೆ ಇಳಿಕೆ ಮಾಡಲಾಗಿದೆ.

ADVERTISEMENT

ಮುಂಬರುವ ಅಕ್ಟೋಬರ್‌ ತಿಂಗಳಿಂದ ಆರಂಭವಾಗುವ ಹೊಸ ಕಂಪನಿಗಳ ಮೇಲಿನ ಆದಾಯತೆರಿಗೆಯನ್ನು ಶೇ 15ಕ್ಕೆ ಇಳಿಕೆ ಮಾಡಲಾಗಿದೆ. ಇದು2023ರ ಮಾರ್ಚ್‌ 31ರೊಳಗೆ ಸ್ಥಾಪನೆಯಾಗುವ ನೂತನ ಕಂಪನಿಗಳಿಗೆ ಮಾತ್ರ ಅನ್ವಯವಾಗಲಿದೆ.

ಷೇರು ಪೇಟೆಯಲ್ಲಿ ಚೇತರಿಕೆ

ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್‌ ತೆರಿಗೆ ಕಡಿತದ ಘೋಷಣೆ ಮಾಡುತ್ತಿದ್ದಂತೆ ಷೇರು ಪೇಟೆಯಲ್ಲಿಚೇತರಿಕೆ ಕಂಡುಬಂತು. ಬೆಳಗಿನ ವಹಿವಾಟಿನಲ್ಲಿಸೆನ್ಸೆಕ್ಸ್ 1,926 ಪಾಯಿಂಟ್​ ಹೆಚ್ಚಳವಾದರೆ, ನಿಫ್ಟಿ ಸೂಚ್ಯಂಕ ಕೂಡ ಸುಮಾರು 562 ಅಂಕಗಳಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.