ADVERTISEMENT

ಪಿಎಂ ಇಂಟರ್ನ್‌ಶಿ‍ಪ್‌: 250 ಕಂಪನಿ ನೋಂದಣಿ

ಪಿಟಿಐ
Published 19 ಅಕ್ಟೋಬರ್ 2024, 14:21 IST
Last Updated 19 ಅಕ್ಟೋಬರ್ 2024, 14:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪಿಎಂ ಇಂಟರ್ನ್‌ಶಿ‍ಪ್‌ ಯೋಜನೆಯಡಿ ದೇಶದ ಪ್ರಮುಖ 250 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, 1.25 ಲಕ್ಷ ಯುವಜನರಿಗೆ ವಿವಿಧ ವೃತ್ತಿ ತರಬೇತಿ ನೀಡಲಿವೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್‌ 12ರಿಂದ ಯುವಜನರ ನೋಂದಣಿಗೆ ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್‌ 2ರಿಂದ ಪ್ರಾಯೋಗಿಕವಾಗಿ ಇಂಟರ್ನ್‌ಶಿಪ್‌ ಆರಂಭವಾಗಲಿದೆ.

21ರಿಂದ 24 ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಕೇಂದ್ರ ಕಾರ್ಪೊರೇಟ್‌ ವ್ಯವಹಾರ ಸಚಿವಾಲಯದ ಪೋರ್ಟಲ್‌ನಲ್ಲಿ (www.pminternship.mca.gov.in) ಅರ್ಜಿ ಸಲ್ಲಿಸಬಹುದಾಗಿದೆ. 

ADVERTISEMENT

ಮುಂದಿನ ಐದು ವರ್ಷದಲ್ಲಿ ಹಂತ ಹಂತವಾಗಿ ಒಂದು ಕೋಟಿ ಯುವಜನರಿಗೆ ವೃತ್ತಿ ತರಬೇತಿ ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಆಯ್ಕೆಯಾದವರಿಗೆ 12 ತಿಂಗಳು ತರಬೇತಿ ನೀಡಲಾಗುತ್ತದೆ. ಮಾಸಿಕ ₹5 ಸಾವಿರ ಭತ್ಯೆ ಸಿಗಲಿದೆ. ಅಲ್ಲದೆ, ಸರ್ಕಾರವು ಒಂದು ಬಾರಿಗೆ ₹6 ಸಾವಿರ ಆರ್ಥಿಕ ನೆರವು ನೀಡಲಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರವು ಈ ಯೋಜನೆಗೆ ₹800 ಕೋಟಿ ಅನುದಾನವನ್ನು ಮೀಸಲಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.