ನವದೆಹಲಿ: ದೇಶದಾದ್ಯಂತ ದಿಗ್ಬಂಧನ ಜಾರಿಯಲ್ಲಿದ್ದ 60 ದಿನಗಳಲ್ಲಿ ರಿಟೇಲ್ ವ್ಯಾಪಾರ ವಹಿವಾಟಿಗೆ ₹9 ಲಕ್ಷ ಕೋಟಿ ಮೊತ್ತದ ನಷ್ಟ ಉಂಟಾಗಿದೆ.
ದೇಶಿ ರಿಟೇಲ್ ವ್ಯಾಪಾರವು ಸದ್ಯಕ್ಕೆ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಿದೆ. ಲಾಕ್‌ಡೌನ್ ಸಡಿಲಿಕೆ ನಂತರದ ಒಂದು ವಾರದ ಅವಧಿಯಲ್ಲಿ ಕೇವಲ ಶೇ 5ರಷ್ಟು ವ್ಯಾಪಾರ ನಡೆದಿದೆ. ಮಳಿಗೆಗಳಲ್ಲಿ ಶೇ 8ರಷ್ಟು ನೌಕರರು ಕೆಲಸಕ್ಕೆ ಮರಳಿದ್ದಾರೆ. ಶೇ 80ರಷ್ಟು ಕೆಲಸಗಾರರು ತಮ್ಮ ಸ್ವಂತ ರಾಜ್ಯಕ್ಕೆ ಮರಳಿದ್ದಾರೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ತಿಳಿಸಿದೆ.
’₹9 ಲಕ್ಷ ಕೋಟಿ ಮೊತ್ತದ ವಹಿವಾಟು ನಷ್ಟದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ರೂಪದಲ್ಲಿ ಬರಬೇಕಾಗಿದ್ದ ₹1.5 ಲಕ್ಷ ಕೋಟಿ ವರಮಾನಕ್ಕೆ ಖೋತಾ ಬಿದ್ದಿದೆ. ವರ್ತಕರು ಹಣಕಾಸು ಕೊರತೆ ಎದುರಿಸುತ್ತಿದ್ದಾರೆ. ಸರ್ಕಾರದ ಯಾವುದೇ ಬೆಂಬಲ ದೊರೆಯದ ಕಾರಣಕ್ಕೆ ವಹಿವಾಟಿನ ಭವಿಷ್ಯದ ಬಗ್ಗೆ ಆತಂಕ ಮೂಡಿದೆ’ಎಂದು ‘ಸಿಎಐಟಿ’ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಹೇಳಿದ್ದಾರೆ.
5 %: ಒಂದು ವಾರದಿಂದೀಚೆಗಿನ ವಹಿವಾಟು
8 %: ಕೆಲಸಕ್ಕೆ ಮರಳಿರುವ ನೌಕರರು
80 %: ಸ್ವಂತ ರಾಜ್ಯಕ್ಕೆ ಮರಳಿರುವ ಕೆಲಸಗಾರರು
₹ 1.5 ಲಕ್ಷ ಕೋಟಿ: ಕೇಂದ್ರ, ರಾಜ್ಯಗಳಿಗೆ ಜಿಎಸ್‌ಟಿ ವರಮಾನ ನಷ್ಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.