ADVERTISEMENT

ಸಿಮೆಂಟ್‌, ಉಕ್ಕು ದರ ದಿಢೀರ್‌ ಏರಿಕೆ: ಕ್ರೆಡಾಯ್‌ ಆಕ್ಷೇಪ

ಪಿಟಿಐ
Published 9 ಮೇ 2020, 20:20 IST
Last Updated 9 ಮೇ 2020, 20:20 IST
   

ನವದೆಹಲಿ : ಕೆಲವೇ ವಾರಗಳಲ್ಲಿ ಸಿಮೆಂಟ್‌ ಮತ್ತು ಉಕ್ಕಿನ ದರದಲ್ಲಿ ದಿಢೀರನೆ ಶೇ 40–50ರಷ್ಟು ಏರಿಕೆ ಮಾಡಲಾಗಿದ್ದು, ಈ ಮೂಲಕ ತಯಾರಕರು ಅಕ್ರಮ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂದು ಕ್ರೆಡಾಯ್‌ ಆರೋಪ ಮಾಡಿದೆ.

ದರ ಏರಿಕೆ ನಿಯಂತ್ರಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ಸಿಂಗ್‌ ಪುರ ಅವರಿಗೆ ಪತ್ರವನ್ನೂ ಬರೆದಿದೆ.

ಲಾಕ್‌ಡೌನ್‌ ಇದ್ದರೂವಿವಿಧ ರಾಜ್ಯಗಳಲ್ಲಿ ಪ್ರತಿ ಬ್ಯಾಗ್‌ ಸಿಮೆಂಟ್‌ ದರ ₹100–250ರವರೆಗೆ ಏರಿಕೆಯಾಗಿದ್ದು, ಟನ್‌ ಉಕ್ಕಿನ ದರ ₹ 2,000–2,500ರವರೆಗೂ ಹೆಚ್ಚಾಗಿದೆ ಎಂದು ತಿಳಿಸಿದೆ.

ADVERTISEMENT

ಲಾಕ್‌ಡೌನ್‌ನಿಂದಾಗಿ ರಿಯಲ್‌ ಎಸ್ಟೇಟ್‌ ಉದ್ಯಮ ಸಂಕಷ್ಟಕ್ಕೆ ಒಳಗಾಗಿದೆ. ಹೀಗಿರುವಾಗಿ ಈ ರೀತಿ ಏಕಾಏಕಿ ಕಚ್ಚಾ ಸಾಮಗ್ರಿಗಳ ದರ
ದಲ್ಲಿ ಏರಿಕೆ ಮಾಡಿದರೆ ಅದರಿಂದ ನಿರ್ಮಾಣ ವೆಚ್ಚ ಹೆಚ್ಚಾಗಲಿದ್ದು, ಅಂತಿಮವಾಗಿ ಗಾಹಕರಿಗೂ ಹೊರೆಯಾಗಲಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.