ನವದೆಹಲಿ: 2024–25ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ಸಾಲ ನೀಡಿಕೆ ಪ್ರಮಾಣವು ಇಳಿಕೆಯಾಗಲಿದೆ ಎಂದು ಕ್ರೆಡಿಟ್ ರೇಟಿಂಗ್ಸ್ ಏಜೆನ್ಸಿ ಐಸಿಆರ್‌ಎ ತಿಳಿಸಿದೆ.
ಸಾಲ ನೀಡಿಕೆ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ನಿಯಾಮಾವಳಿಗಳನ್ನು ಬಿಗಿಗೊಳಿಸಿದೆ. ಮತ್ತೊಂದೆಡೆ ದೇಶೀಯ ಮಾರುಕಟ್ಟೆಯಲ್ಲಿನ ಹಣಕಾಸಿನ ಸ್ಥಿತಿಯು ಬಿಗಿಯಾಗಿದೆ. ಠೇವಣಿ ಸಂಗ್ರಹದಲ್ಲಿ ಇಳಿಕೆಯಾಗಿದೆ. ಇದು ಸಾಲ ನೀಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.
2023–24ನೇ ಆರ್ಥಿಕ ವರ್ಷದಲ್ಲಿ ₹22.3 ಲಕ್ಷ ಕೋಟಿ ಸಾಲ ನೀಡಲಾಗಿತ್ತು (ಶೇ 16.3ರಷ್ಟು). ಪ್ರಸಕ್ತ ಹಣಕಾಸು ವರ್ಷದಲ್ಲಿ ₹19 ಲಕ್ಷ ಕೋಟಿಯಿಂದ ₹20.5 ಲಕ್ಷ ಕೋಟಿ ಸಾಲ ನೀಡುವ ನಿರೀಕ್ಷೆಯಿದೆ. ಒಟ್ಟಾರೆ ಸಾಲ ನೀಡಿಕೆ ಪ್ರಮಾಣವು ಶೇ 12ರಷ್ಟು ಆಗಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.