ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆ ಸಮಸ್ಯೆ ಎದುರಾಗಿದೆ. ಇದರಿಂದಾಗಿ ತೈಲ ದರವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ.
ಮೇ 2 ರಿಂದ 6ರವರೆಗಿನ ಅವಧಿಯಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರಲ್‌ಗೆ 9 ಡಾಲರ್‌ಗಳಷ್ಟು ಹೆಚ್ಚಾಗಿದ್ದು, 113.3 ಡಾಲರ್‌ಗೆ ಏರಿಕೆ ಆಗಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೇಟ್ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲ ದರ ಬ್ಯಾರಲ್‌ಗೆ 108.98 ಡಾಲರ್‌ಗಳಿಗೆ ತಲುಪಿದೆ.
ತುರ್ತು ಪರಿಸ್ಥಿತಿಯಲ್ಲಿ ಬಳಸುವ ಸಂಗ್ರಹ ಮಾಡುವ ಸಲುವಾಗಿ 6 ಕೋಟಿ ಬ್ಯಾರಲ್ ಕಚ್ಚಾ ತೈಲ ಖರೀದಿಸಲು ಅಮೆರಿಕ ನಿರ್ಧರಿಸಿದೆ. ಇದರಿಂದಾಗಿ ತೈಲ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.
ಸೌದಿ ಅರೇಬಿಯಾ, ರಷ್ಯಾ ಸೇರಿದಂತೆ ಕಚ್ಚಾ ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಉತ್ಪಾದನೆ ಹೆಚ್ಚಿಸಲು ನಿರಾಕರಿಸಿವೆ. ಇದು ತೈಲ ದರ ಹೆಚ್ಚಳಕ್ಕೆ ಕಾರಣ ಆಗಿದೆ. ಇದರ ಜೊತೆಗೆ ರಷ್ಯಾ–ಉಕ್ರೇನ್ ಸಂಘರ್ಷದಿಂದಾಗಿ ತೈಲ ಪೂರೈಕೆ ಸಮಸ್ಯೆ ಉಂಟಾಗಿರುವುದು ಹಾಗೂ ರಷ್ಯಾದ ಕಚ್ಚಾ ತೈಲದ ಮೇಲೆ ನಿಷೇಧ ಹೇರಲು ಐರೋಪ್ಯ ಒಕ್ಕೂಟ ಮುಂದಾಗಿರುವುದು ಸಹ ತೈಲ ದರ ಹೆಚ್ಚಳ ಆಗುವಂತೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.