ನವದೆಹಲಿ (ಪಿಟಿಐ): ಡಿ–ಮಾರ್ಟ್ ಮಳಿಗೆಗಳನ್ನು ನಿಯಂತ್ರಿಸುತ್ತಿರುವ ಅವೆನ್ಯು ಸೂಪರ್‌ಮಾರ್ಟ್ಸ್ ಲಿಮಿಟೆಡ್ ಕಂಪನಿಯ ನಿವ್ವಳ ಲಾಭವು 2023ರ ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 7.81ರಷ್ಟು ಹೆಚ್ಚಾಗಿ ₹460 ಕೋಟಿಗೆ ಏರಿಕೆ ಕಂಡಿದೆ.
2022ರ ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ₹426 ಕೋಟಿ ಆಗಿತ್ತು ಎಂದು ಅವೆನ್ಯು ಸೂಪರ್‌ಮಾರ್ಟ್ಸ್ ಷೇರುಪೇಟೆಗೆ ಮಾಹಿತಿ ನೀಡಿದೆ.
ಕಾರ್ಯಚರಣಾ ವರಮಾನ ಶೇ 20.57ರಷ್ಟು ಹೆಚ್ಚಾಗಿ ₹10,594 ಕೋಟಿಗೆ ತಲುಪಿದೆ. ಹಿಂದಿನ ಅವಧಿಯಲ್ಲಿ ಕಾರ್ಯಾಚರಣಾ ವರಮಾನವು ₹8,786 ಕೋಟಿಯಷ್ಟು ಆಗಿತ್ತು.
ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ವೆಚ್ಚವು ₹ 8,210 ಕೋಟಿಯಿಂದ ₹10,002 ಕೋಟಿಗೆ ಶೇ 21.82ರಷ್ಟು ಏರಿಕೆ ಆಗಿದೆ.
2023ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭ ಶೇ 59ರಷ್ಟು ಹೆಚ್ಚಾಗಿ ₹2,378 ಕೋಟಿಗೆ ತಲುಪಿದೆ. ಕಾರ್ಯಾಚರಣಾ ವರಮಾನ ಶೇ 38ರಷ್ಟು ಹೆಚ್ಚಾಗಿ ₹42,839 ಕೋಟಿಗೆ ಏರಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.