ನವದೆಹಲಿ: ಭಾರತದಲ್ಲಿ ಪ್ರತಿ ತಿಂಗಳ ಸರಾಸರಿ ಡೇಟಾ ಬಳಕೆಯು 2025ರ ವೇಳೆಗೆ 25ಜಿಬಿಗೆ ತಲುಪಲಿದೆ ಎಂದು ಎರಿಕ್ಸನ್ ಕಂಪನಿ ಹೇಳಿದೆ.
2019ರಲ್ಲಿ ಪ್ರತಿ ತಿಂಗಳ ಸರಾಸರಿ ಡೇಟಾ ಬಳಕೆ 12 ಜಿಬಿ ಇತ್ತು.
ಕೈಗೆಟುಕುವ ದರಕ್ಕೆ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳು ಲಭ್ಯವಿರುವುದು ಹಾಗೂ ವಿಡಿಯೊ ನೋಡುವ ಹವ್ಯಾಸ ಹೆಚ್ಚುತ್ತಿರುವುದರಿಂದ ಡೇಟಾ ಬಳಕೆಯಲ್ಲಿ ಏರಿಕೆ ಕಂಡುಬರಲಿದೆ. 2020ರ ಜೂನ್ ತಿಂಗಳ ಮೊಬಿಲಿಟಿ ರಿಪೋರ್ಟ್‌ನಲ್ಲಿ ಈ ಮಾಹಿತಿ ನೀಡಿದೆ.
4%
ಬ್ರಾಡ್‌ಬ್ಯಾಂಡ್ ಸೌಲಭ್ಯ ಇರುವ ಮನೆಗಳು
41 ಕೋಟಿ
2025ರ ವೇಳೆಗೆ ಹೊಸದಾಗಿ ಸ್ಮಾರ್ಟ್‌ಫೋನ್ ಬಳಸಲಿರುವವರು
58%
2019ರಲ್ಲಿದ್ದ ಮೊಬೈಲ್ ಬ್ರಾಡ್‌ಬ್ಯಾಂಡ್ ಬಳಸುವವರ ಪ್ರಮಾಣ
82%
2025ರ ವೇಳೆಗೆ ಮೊಬೈಲ್ ಬ್ರಾಡ್‌ಬ್ಯಾಂಡ್ ಬಳಸುವವರಲ್ಲಿ ಆಗಲಿರುವ ಏರಿಕೆ
***
2025ರ ವೇಳೆಗೆ
18%
5ಜಿ ಬಳಕೆ ಮಾಡಲಿರುವವರು
64%
4ಜಿ ಬಳಕೆದಾರರ ಪ್ರಮಾಣ
18%
2ಜಿ/3ಜಿ ಬಳಕೆದಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.