ನವದೆಹಲಿ: ಡೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ (ಎಂ.ಎಫ್) ಅಕ್ಟೋಬರ್‌ನಲ್ಲಿ ₹1.57 ಲಕ್ಷ ಕೋಟಿ ಹೂಡಿಕೆಯಾಗಿದೆ.
ಈ ಫಂಡ್‌ಗಳ ಸಂಪತ್ತಿನ ಒಟ್ಟು ಮೌಲ್ಯವು ಸೆಪ್ಟೆಂಬರ್ ಅಂತ್ಯಕ್ಕೆ ₹14.97 ಲಕ್ಷ ಕೋಟಿ ಇತ್ತು. ಅಕ್ಟೋಬರ್‌ನಲ್ಲಿ ₹16.64 ಲಕ್ಷ ಕೋಟಿಗೆ ಮುಟ್ಟಿದೆ. ಒಟ್ಟಾರೆ ಶೇ 11ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಭಾನುವಾರ ತಿಳಿಸಿದೆ.
ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ ₹41,887 ಕೋಟಿ ಹೂಡಿಕೆಯಾಗಿದೆ. ಎಂದು ತಿಳಿಸಿದೆ.
ಅಕ್ಟೋಬರ್‌ನಲ್ಲಿ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಒಟ್ಟು ₹2.4 ಲಕ್ಷ ಕೋಟಿ ಒಳಹರಿವಾಗಿದೆ. ಸೆಪ್ಟೆಂಬರ್‌ನಲ್ಲಿ ₹71,114 ಕೋಟಿ ಬಂಡವಾಳದ ಹೊರಹರಿವು ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.