ADVERTISEMENT

ಅಂತಿಮ ಹಂತದಲ್ಲಿ ಡೀಪ್ ಟೆಕ್ ನವೋದ್ಯಮ ಮೀಸಲು ನೀತಿ

ಪಿಟಿಐ
Published 18 ಮಾರ್ಚ್ 2024, 15:58 IST
Last Updated 18 ಮಾರ್ಚ್ 2024, 15:58 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಡೀಪ್ ಟೆಕ್ ನವೋದ್ಯಮಗಳಿಗಾಗಿ ಮೀಸಲಾದ ನೀತಿಯು ಅಂತರ-ಸಚಿವಾಲಯದ ಚರ್ಚೆಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅದನ್ನು‍ಪ್ರ ಕಟಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ನವೋದ್ಯಮ ಮಹಾಕುಂಭದಲ್ಲಿ ಮಾತನಾಡುತ್ತಾ, ನವೋದ್ಯಮಗಳು ರಾಷ್ಟ್ರ ಮತ್ತು ತಮ್ಮ ಅನುಕೂಲಕ್ಕಾಗಿ ನಾವೀನ್ಯತೆಗಳನ್ನು ಬೌದ್ಧಿಕ ಆಸ್ತಿ ಹಕ್ಕುಗಳಾಗಿ ಪರಿವರ್ತಿಸುವ ಅಗತ್ಯವಿದೆ. ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗಾಗಿ ಪ್ರತ್ಯೇಕ ವಿಭಾಗ ಆರಂಭಿಸಲಾಗುವುದು ಎಂದು ಹೇಳಿದರು.

ADVERTISEMENT

ಧನಸಹಾಯಕ್ಕಿಂತ ಹೆಚ್ಚಾಗಿ, ಸ್ಟಾರ್ಟ್‌ಅಪ್‌ಗಳ ಉತ್ಪನ್ನವನ್ನು ಸರ್ಕಾರವು ಖರೀದಿಸುವ ಅಗತ್ಯವಿದೆ. ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್ (ಜಿಇಎಂ) ಈ ಅವಕಾಶವನ್ನು ಒದಗಿಸುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.