ADVERTISEMENT

ಹೋಟೆಲ್ ಸೇವಾ ಶುಲ್ಕ: ಸಿಸಿಪಿಎ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

ಪಿಟಿಐ
Published 20 ಜುಲೈ 2022, 16:19 IST
Last Updated 20 ಜುಲೈ 2022, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೋಟೆಲ್‌ಗಳು ಮತ್ತು ರೆಸ್ಟಾರೆಂಟ್‌ಗಳು ಆಹಾರದ ಬಿಲ್‌ ಜೊತೆ ಸೇವಾ ಶುಲ್ಕ ಸಂಗ್ರಹಿಸುವಂತೆ ಇಲ್ಲ ಎಂದು ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.

ಸಿಸಿಪಿಎ ಆದೇಶ ಪ್ರಶ್ನಿಸಿ ರಾಷ್ಟ್ರೀಯ ರೆಸ್ಟಾರೆಂಟ್‌ ಸಂಘ (ಎನ್‌ಆರ್‌ಎಐ) ಹಾಗೂ ಹೋಟೆಲ್‌ ಮತ್ತು ರೆಸ್ಟಾರೆಂಟ್‌ಗಳ ಸಂಘಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ ವರ್ಮ, ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಸಿಪಿಎಗೆ ಸೂಚಿಸಿದ್ದಾರೆ.

ಅರ್ಜಿದಾರ ಸಂಘಟನೆ, ಒಕ್ಕೂಟದ ಸದಸ್ಯರು ಆಹಾರದ ಬಿಲ್‌ ಮೇಲೆ ಸೇವಾ ಶುಲ್ಕ ಪಾವತಿಸಬೇಕು ಎಂಬುದನ್ನು ಮೆನು ಮೇಲೆ ಪ್ರಮುಖವಾಗಿ ಮುದ್ರಿಸಿದ್ದರೆ, ಸಿಸಿಪಿಎ ಆದೇಶಕ್ಕೆ ತಡೆ ಅನ್ವಯವಾಗುತ್ತದೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.