ADVERTISEMENT

ಅದಾನಿ ಸಮೂಹ ವಿರುದ್ಧ ಹಿಂಡನ್‌ಬರ್ಗ್‌ ಆರೋಪ: ಬಾಹ್ಯ ತನಿಖೆ ಬಯಸಿದ್ದ ಡೆಲಾಯ್ಟ್

ಪಿಟಿಐ
Published 13 ಆಗಸ್ಟ್ 2023, 16:03 IST
Last Updated 13 ಆಗಸ್ಟ್ 2023, 16:03 IST
ಅದಾನಿ ಸಮೂಹ
ಅದಾನಿ ಸಮೂಹ   

ನವದೆಹಲಿ: ಅದಾನಿ ಸಮೂಹಕ್ಕೆ ಸೇರಿದ ಕಂಪನಿಯೊಂದರ ಲೆಕ್ಕಪರಿಶೋಧಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಡೆಲಾಯ್ಟ್‌ ಕಂಪನಿಯು ಹಿಂಡನ್‌ಬರ್ಗ್ ರಿಸರ್ಚ್‌ ಸಂಸ್ಥೆಯು ಮಾಡಿರುವ ಆರೋಪಗಳ ಬಗ್ಗೆ ಬಾಹ್ಯ ತನಿಖೆ ನಡೆಸುವಂತೆ ಒತ್ತಾಯಿಸಿತ್ತು.

ಹಿಂಡನ್‌ಬರ್ಗ್‌ ಸಂಸ್ಥೆಯ ಆರೋಪಗಳು ತನ್ನ ಆರ್ಥಿಕ ಲೆಕ್ಕಪತ್ರಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷನಲ್‌ ಎಕನಾಮಿಕ್ ಜೋನ್‌ (ಎಪಿಎಸ್‌ಇಜೆಡ್) ಕಂಪನಿ ಹೇಳಿದೆ. ಲೆಕ್ಕಪರಿಶೋಧಕ ಸ್ಥಾನಕ್ಕೆ ರಾಜೀನಾಮೆ ನೀಡಲು ಡೆಲಾಯ್ಟ್‌ ನೀಡಿರುವ ಕಾರಣಗಳು ಒಪ್ಪುವಂತಹದ್ದಾಗಿಲ್ಲ ಎಂದು ಎಪಿಎಸ್‌ಇಜೆಡ್ ಹೇಳಿದೆ.

ಡೆಲಾಯ್ಟ್‌ ಸ್ಥಾನಕ್ಕೆ ಲೆಕ್ಕಪರಿಶೋಧಕ ಸಂಸ್ಥೆಯಾಗಿ ಎಂಎಸ್‌ಕೆಎ ಆ್ಯಂಡ್‌ ಅಸೋಸಿಯೇಟ್ಸ್‌ ಅನ್ನು ಅದಾನಿ ಪೋರ್ಟ್ಸ್ ನೇಮಿಸಿದ್ದು, 2024ರಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯವರೆಗೂ ಸಂಸ್ಥೆಯು ಲೆಕ್ಕಪರಿಶೋಧಕ ಆಗಿ ಕೆಲಸ ಮಾಡಲಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.