ನವದೆಹಲಿ: ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ ಎಸಗಿದ ವಿಮಾನಯಾನ ಸಂಸ್ಥೆ ಆಕಾಸಾ ಏರ್‌ಗೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ₹30 ಲಕ್ಷ ದಂಡ ವಿಧಿಸಿದೆ.
ದಂಡ ವಿಧಿಸಿದ ಆದೇಶದ ಪ್ರತಿಯನ್ನು ಅಕ್ಟೋಬರ್ 17ರಂದು ಸ್ವೀಕರಿಸಲಾಗಿದೆ. ಕಂಪನಿಯು ಈ ವಿಚಾರವಾಗಿ ಡಿಜಿಸಿಎ ಜೊತೆ ನಿಕಟ ಸಂಪರ್ಕದಲ್ಲಿದೆ. ಆಕಾಸಾ ಏರ್ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುತ್ತಿದ್ದು, ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಬದ್ಧವಾಗಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.