ನವದೆಹಲಿ: ವಿಮಾನ ಅವಘಡ ತಡೆಯುವುದಕ್ಕೆ ಸಂಬಂಧಿಸಿದಂತೆ ಪೈಲಟ್‌ಗಳ ವಿಶ್ರಾಂತಿ ಅವಧಿಯನ್ನು ಹೆಚ್ಚಿಸುವುದು ಸೇರಿದಂತೆ ಹೊಸ ನಿಯಮಾವಳಿಗಳ ಅನುಷ್ಠಾನಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ನಿರ್ಧರಿಸಿದೆ.
ಪೈಲಟ್‌ಗಳ ಕರ್ತವ್ಯದ ಸಮಯ ಮಿತಿಯನ್ನು ಪರಿಷ್ಕರಿಸಲಾಗುವುದು. ಈಗಿರುವ ವಾರದ ವಿಶ್ರಾಂತಿ ಅವಧಿಯನ್ನು 36 ಗಂಟೆಯಿಂದ 48 ಗಂಟೆವರೆಗೆ ಹೆಚ್ಚಿಸಲಾಗುವುದು ಎಂದು ಹೇಳಿದೆ.
ಪೈಲಟ್‌ಗಳಿಗೆ ಆಯಾಸ ಉಂಟು ಮಾಡುವ ಗರಿಷ್ಠ ಹಾರಾಟದ ಸಮಯ, ರಾತ್ರಿಪಾಳಿಯ ಕರ್ತವ್ಯ, ವಾರದ ವಿಶ್ರಾಂತಿ ಅವಧಿ ಸೇರಿದಂತೆ ಹಲವು ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಈ ನಿಯಮಾವಳಿ ರೂಪಿಸಲಾಗಿದೆ ಎಂದು ಹೇಳಿದೆ.
ರಾತ್ರಿ ವೇಳೆ ಗರಿಷ್ಠ ಹಾರಾಟದ ಸಮಯವನ್ನು ಎಂಟು ಗಂಟೆಗೆ ಹಾಗೂ ಗರಿಷ್ಠ ಮಟ್ಟದ ಕರ್ತವ್ಯದ ಅವಧಿಯನ್ನು 10 ಗಂಟೆಗೆ ನಿಗದಿಪಡಿಸಲಾಗಿದೆ. ಹಾರಾಟಕ್ಕೆ ನಿರ್ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಈ ನಿಯಮಾವಳಿ ರೂಪಿಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.