ADVERTISEMENT

ಗೂಗಲ್‌ ಪೇ ಕಡೆಯಿಂದ ಆಕಸ್ಮಿಕವಾಗಿ ₹88,000 ಹಣ ಬಳಕೆದಾರರ ಖಾತೆಗೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2023, 13:54 IST
Last Updated 10 ಏಪ್ರಿಲ್ 2023, 13:54 IST
ಗೂಗಲ್‌ ಪೇ
ಗೂಗಲ್‌ ಪೇ   

ಬೆಂಗಳೂರು: ಯುಪಿಐ ಪಾವತಿ ಸೇವೆ ನೀಡುವ ಜನಪ್ರಿಯ ಗೂಗಲ್ ಪೇ ಆಕಸ್ಮಿಕವಾಗಿ ಕೆಲ ಬಳಕೆದಾರರಿಗೆ ಸುಮಾರು ₹88 ಸಾವಿರ ಹಣ ರವಾನಿಸಿಬಿಟ್ಟಿದೆ!

ಹೌದು, ಈ ಕುರಿತು ಅನೇಕ ಗೂಗಲ್ ಪೇ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕೆಲವರಿಗೆ ಕನಿಷ್ಠ ₹100, ಇನ್ನೂ ಕೆಲವರಿಗೆ ಗರಿಷ್ಠ ₹1000 ರುಪಾಯಿ ಹಾಕಿರುವುದು ಗೊತ್ತಾಗಿದೆ. ಒಟ್ಟಾರೆ ಹೀಗೆ 88 ಸಾವಿರ ಹಣ ಗೂಗಲ್ ಪೇ ಕಡೆಯಿಂದ ಹೋಗಿದೆ ಎಂದು ತಿಳಿದು ಬಂದಿದೆ. ಈ ಹಣ ಸ್ಕ್ರ್ಯಾಚ್ ಕಾರ್ಡ್ ರೂಪದಲ್ಲಿ ಸಂದಾಯವಾಗಿದೆ.

ADVERTISEMENT

ಯಾರಾರಿಗೆ ಆಕಸ್ಮಿಕವಾಗಿ ಹಣ ಹೋಗಿದೆಯೋ ಅವರಿಗೆ ಮೇಲ್ ಕಳಿಸಿರುವ ಗೂಗಲ್ ಪೇ, ಹಣ ಹಿಂಪಡೆಯಲಾಗುವುದು ಎಂದು ತಿಳಿಸಿದೆ. ಆದರೆ, ತಮಗೆ ಆಕಸ್ಮಿಕವಾಗಿ ಹಣ ಬಂದಿರುವುದನ್ನು ನೋಡಿದ ಕೆಲವರು ಅದನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದು ಹಾಗೂ ಇನ್ನೂ ಕೆಲವರು ಹಣವನ್ನು ವಿತ್‌ಡ್ರಾ ಮಾಡಿಕೊಂಡಿದ್ದು ಕೂಡ ನಡೆದಿದೆ.

ಗೂಗಲ್ ಪೇ ಹೊಸ ಅಪ್ಡೇಟ್ ನೀಡುತ್ತಿದ್ದು, ಇ ವೇಳೆ ಪ್ರಾಯೋಗಿಕವಾಗಿ ಹೊಸ ಫೀಚರ್ ನೀಡುವಲ್ಲಿ ಅಥವಾ ತಾಂತ್ರಿಕ ಅಡಚಣೆಯಿಂದ ಈ ಅಚಾತುರ್ಯ ನಡೆದಿರಬಹುದು ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.