ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಕಳೆದ 20 ದಿನಗಳಲ್ಲಿ 2.15 ಲಕ್ಷ ಪಿಂಚಣಿದಾರರು ಸಲ್ಲಿಸಿದ್ದ ಡಿಜಿಟಲ್ ರೂಪದ ಜೀವನ್ ಪ್ರಮಾಣ ಪತ್ರಗಳಿಗೆ (ಡಿಎಲ್‌ಸಿ) ಅನುಮೋದನೆ ನೀಡಿದೆ.
ಪ್ರತಿ ವರ್ಷದ ನವೆಂಬರ್‌ನಲ್ಲಿ ಪಿಂಚಣಿದಾರರು ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹೀಗಾಗಿ, ಡಿಜಿಟಲ್ ರೂಪದ ಪ್ರಮಾಣ ಪತ್ರ ಸಲ್ಲಿಕೆ ಸಂಬಂಧ ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ ಪ್ರೋತ್ಸಾಹ ನೀಡಲು ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ್ದು, ಇದೇ ತಿಂಗಳ 30ರ ವರೆಗೆ ನಡೆಯಲಿದೆ.
‘ದೆಹಲಿ, ಗುರುಗ್ರಾಮ, ಚಂಡೀಗಢ, ಶಿಮ್ಲಾ, ಲುಧಿಯಾನ, ಜಮ್ಮು, ಕಾಶ್ಮೀರ ಸೇರಿ ಇತರೆ ಸ್ಥಳಗಳಲ್ಲಿ ಬ್ಯಾಂಕ್ ಹೆಚ್ಚು ಪಿಂಚಣಿದಾರರನ್ನು ಹೊಂದಿದೆ. ಇಲ್ಲಿ ಬೃಹತ್ ಶಿಬಿರಗಳನ್ನು ಏರ್ಪಡಿಸಲಾಗಿದೆ. ಪಿಂಚಣಿದಾರರಿಗೆ ಅನುಕೂಲ ಕಲ್ಪಿಸಲು ಅವರ ಮನೆ ಬಾಗಿಲಿನಲ್ಲೇ ಡಿಎಲ್‌ಸಿ ಸೇವೆ ಒದಗಿಸಲಾಗುತ್ತಿದೆ. ಡಿಸೆಂಬರ್ 31ರ ವರೆಗೆ ಪಿಂಚಣಿದಾರರ ಮನೆಗೆ ತೆರಳಿ ಉಚಿತವಾಗಿ ಡಿಎಲ್‌ಸಿ ನೀಡಲಾಗುತ್ತದೆ’ ಎಂದು ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂಜಯ್ ವರ್ಷ್ನೇಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.