ನವದೆಹಲಿ: ‘ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಯಿಂದ ₹ 13.35 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಕಷ್ಟವಾದರೂ ಅಸಾಧ್ಯವೇನಲ್ಲ’ ಎಂದು ಸಿಬಿಡಿಟಿ ಅಧ್ಯಕ್ಷ ಪ್ರಮೋದ್ ಚಂದ್ರ ಮೋದಿ ಹೇಳಿದ್ದಾರೆ.
‘ಈ ಹಿಂದೆ ₹ 13.78 ಲಕ್ಷ ಕೋಟಿ ಸಂಗ್ರಹವಾಗಲಿದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿತ್ತು. ಅದು ವರ್ಷದಿಂದ ವರ್ಷಕ್ಕೆ ಶೇ 24ರಷ್ಟು ಏರಿಕೆ ಪ್ರಮಾಣದಲ್ಲಿತ್ತು. ವಾಸ್ತವದಲ್ಲಿ ಅಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಸಾಧ್ಯವಿಲ್ಲ ಎನ್ನುವುದನ್ನು ತಿಳಿಸಲಾಗಿತ್ತು. ಹೀಗಾಗಿ ಪರಿಷ್ಕೃತ ಅಂದಾಜು ನಿಗದಿಮಾಡಲಾಗಿದೆ’ ಎಂದಿದ್ದಾರೆ.
ಹಿಂದಿನ ಹಣಕಾಸು ವರ್ಷದಲ್ಲಿ ಸರ್ಕಾರ ಸಂಗ್ರಹಿಸಿರುವ ತೆರಿಗೆ ಪ್ರಮಾಣ ಉತ್ತಮವಾಗಿದೆ. ಶೇ 17.5ರಷ್ಟು ತೆರಿಗೆ ಸಂಗ್ರಹವಾಗಿದೆ. ಹೀಗಾಗಿ ಈ ಹಣಕಾಸು ವರ್ಷದಲ್ಲಿ ಶೇ 17.5ರಷ್ಟು ಗುರಿ ಸಾಧನೆ ಕಡ್ಡಾಯವಾಗಿದೆ.
‘ಪ್ರಸಕ್ತ ಬಜೆಟ್‌ನಲ್ಲಿ ಹೂಡಿಕೆ ಮತ್ತು ಪ್ರಗತಿಗೆ ನೀಡಿರುವ ಆದ್ಯತೆಯಿಂದಾಗಿ ದೇಶದ ಆರ್ಥಿಕತೆ ಚೇತರಿಸಿಕೊಳ್ಳಲಿದ್ದು, ವರಮಾನ ಸಂಗ್ರಹವೂ ಉತ್ತಮವಾಗಿರುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.