ADVERTISEMENT

ನೇರ ತೆರಿಗೆ ಸಂಗ್ರಹ: ₹ 12.50 ಲಕ್ಷ ಕೋಟಿಯನ್ನೂ ಮೀರಲಿದೆ -ಸಿಬಿಡಿಟಿ

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಧ್ಯಕ್ಷ ಜೆ.ಬಿ. ಮಹಾಪಾತ್ರ

ಪಿಟಿಐ
Published 3 ಫೆಬ್ರುವರಿ 2022, 19:30 IST
Last Updated 3 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ₹ 12.50 ಲಕ್ಷ ಕೋಟಿಯ ಅಂದಾಜನ್ನು ಮೀರುವ ನಿರೀಕ್ಷೆ ಇದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಜೆ.ಬಿ. ಮಹಾಪಾತ್ರ ಹೇಳಿದ್ದಾರೆ.

ತೆರಿಗೆ ಪಾವತಿ ಪ್ರಕ್ರಿಯೆಗಳನ್ನು ಸುಲಭಗೊಳಿಸಿರುವುದು ಹಾಗೂ ಕಾರ್ಪೊರೇಟ್ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಾಗಿರುವುದು ಸೇರಿದಂತೆ ಇನ್ನೂ ಹಲವು ಕಾರಣಗಳಿಂದಾಗಿ ಅಂದಾಜನ್ನು ಮೀರಿ ತೆರಿಗೆ ಸಂಗ್ರಹ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆಬ್ರುವರಿ 1ರವರೆಗಿನ ಮಾಹಿತಿಯ ಪ್ರಕಾರ, ನೇರ ತೆರಿಗೆ ಸಂಗ್ರಹವು ₹ 10.38 ಲಕ್ಷ ಕೋಟಿ ಆಗಿದೆ. ಬಜೆಟ್‌ನಲ್ಲಿ ಅಂದಾಜು ಮಾಡಿದ್ದ ₹ 11.08 ಲಕ್ಷ ಕೋಟಿಗಿಂತಲೂ ₹ 70 ಸಾವಿರ ಕಡಿಮೆ ಆಗಿದೆ. ಈ ಸಂಖ್ಯೆಯು ಕಳೆದ ವರ್ಷದಲ್ಲಿ ಸಂಗ್ರಹ ಆಗಿರುವುದಕ್ಕಿಂತಲೂ ಉತ್ತಮವಾಗಿದೆ. ಹಣಕಾಸು ವರ್ಷವು ಅಂತ್ಯವಾಗಲು ಇನ್ನೂ ಎರಡು ತಿಂಗಳು ಬಾಕಿ ಇದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ತೆರಿಗೆ ಸಂಗ್ರಹವುಇಲಾಖೆ ಇತಿಹಾಸದಲ್ಲಿಯೇ ₹ 11.18 ಲಕ್ಷ ಕೋಟಿಯನ್ನು ದಾಟಿಲ್ಲ. ಈ ವರ್ಷ ನಾವು ₹ 12 ಲಕ್ಷ ಕೋಟಿಯ ಗುರಿ ಮೀರಲಿದ್ದೇವೆ. ಪರಿಷ್ಕೃತ ಅಂದಾಜಿನ ಪ್ರಕಾರ ₹ 12.50 ಲಕ್ಷ ಕೋಟಿ ಸಂಗ್ರಹ ಆಗುವ ಅಂದಾಜು ಮಾಡಲಾಗಿದೆ. ಈ ಗುರಿಯನ್ನು ತಲುಪುವ ಮತ್ತು ಅದನ್ನೂ ಮೀರುವ ವಿಶ್ವಾಸ ಇದೆ’ ಎಂದಿದ್ದಾರೆ.

2021–22ಕ್ಕೆ ನಿರೀಕ್ಷೆ
₹ 12.50 ಲಕ್ಷ ಕೋಟಿ:
ಒಟ್ಟು ತೆರಿಗೆ
₹ 6.15 ಲಕ್ಷ ಕೋಟಿ:ವೈಯಕ್ತಿಕ ಆದಾಯ ತೆರಿಗೆ
₹ 6.35ಲಕ್ಷ ಕೋಟಿ:ಕಾರ್ಪೊರೇಟ್‌ ತೆರಿಗೆ

***

ತೆರಿಗೆ ಸಂಗ್ರಹ ವಿವರ
ವರ್ಷ; ಮೊತ್ತ ( ಲಕ್ಷ ಕೋಟಿಗಳಲ್ಲಿ)

2018–19; ₹ 11.18
2019–20;₹ 10.28
2020–21;₹ 9.24
2021–22; ₹ 12.50
(ನಿರೀಕ್ಷೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.