ನವದೆಹಲಿ: ನೇರ ತೆರಿಗೆ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜೂನ್ ಅವಧಿಯಲ್ಲಿ ₹ 3.39 ಲಕ್ಷ ಕೋಟಿಗೆ ತಲುಪಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ 45ರಷ್ಟು ಏರಿಕೆ ಆಗಿದೆ.
ಟಿಡಿಎಸ್ ಸಂಗ್ರಹದಲ್ಲಿ ಶೇ 47ರಷ್ಟು ಮತ್ತು ಮುಂಗಡ ತೆರಿಗೆಯಲ್ಲಿ ಶೇ 33ರಷ್ಟು ಏರಿಕೆ ಆಗಿರುವುದೇ ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳಕ್ಕೆ ಕಾರಣ ಎಂದು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ. 2021–22ರಲ್ಲಿ ₹ 2.33 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ ಆಗಿತ್ತು.
ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ ₹ 14.20 ಲಕ್ಷ ಕೋಟಿ ಸಂಗ್ರಹ ಆಗುವ ಅಂದಾಜನ್ನು ಸರ್ಕಾರ ಹೊಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ₹ 14.10 ಲಕ್ಷ ಕೋಟಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.