ADVERTISEMENT

ಆರ್ಥಿಕ ಅನಿಶ್ಚಿತ ಪರಿಸ್ಥಿತಿ: ಉದ್ಯೋಗ ಕಡಿತಕ್ಕೆ ಮುಂದಾದ ಡಿಸ್ನಿ

ರಾಯಿಟರ್ಸ್
Published 12 ನವೆಂಬರ್ 2022, 19:31 IST
Last Updated 12 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಸ್‌ ಏಂಜಲಿಸ್: ಅಮೆರಿಕದಲ್ಲಿ ಎದುರಾಗಿರುವ ಆರ್ಥಿಕ ಅನಿಶ್ಚಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಾಲ್ಟ್‌ ಡಿಸ್ನಿ ಕಂಪನಿಯು ಹೊಸ ನೇಮಕಾತಿ ಸ್ಥಗಿತಗೊಳಿಸಲು ಮತ್ತು ಒಂದಷ್ಟು ಉದ್ಯೋಗ ಕಡಿತ ಮಾಡಲು ಯೋಜಿಸುತ್ತಿದೆ.

ಡಿಸ್ನಿ+ ಸ್ಟ್ರೀಮಿಂಗ್‌ ಸೇವೆಯನ್ನು ಲಾಭದಾಯಕ ಆಗಿಸುವ ನಿಟ್ಟಿನಲ್ಲಿ ವೆಚ್ಚ ನಿರ್ವಹಣೆ ಮಾಡಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಸಿಇಒ ಬಾಬ್‌ ಚಾಪೆಕ್ ಅವರು ಕಂಪನಿಯ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ತೀರಾ ಅಗತ್ಯ ಇರುವ ಕಡೆಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರವೇ ನೇಮಕ ನಡೆಯಲಿದೆ. ವೆಚ್ಚ ತಗ್ಗಿಸಿಕೊಳ್ಳುವ ಭಾಗವಾಗಿ ಸಣ್ಣ ಪ್ರಮಾಣದಲ್ಲಿ ಸಿಬ್ಬಂದಿ ಕಡಿತದ ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕಂಪನಿಯ ತ್ರೈಮಾಸಿಕದ ಆರ್ಥಿಕ ಸಾಧನೆಯು ಮಾರುಕಟ್ಟೆಯ ನಿರೀಕ್ಷೆಯನ್ನು ತಲುಪಿಲ್ಲ. ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಸ್ಟ್ರೀಮಿಂಗ್‌ ಸೇವೆಯು ನಾಲ್ಕನೇ ತ್ರೈಮಾಸಿಕದಲ್ಲಿ 1.2 ಕೋಟಿ ಚಂದಾದಾರನ್ನು ಪಡೆದುಕೊಂಡಿದೆ. ಆದರೆ, ಕಾರ್ಯಾಚರಣಾ ನಷ್ಟವು ₹12,300 ಕೋಟಿಯಷ್ಟಾಗಿದೆ. 2024ನೇ ಹಣಕಾಸು ವರ್ಷದ ವೇಳೆಗೆ ಡಿಸ್ನಿ+ ಲಾಭಗಳಿಸಲಿದೆ ಎಂದು ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.