ADVERTISEMENT

ರಿಯಲ್‌ ಎಸ್ಟೇಟ್‌: ಡಿಎಲ್‌ಎಫ್‌ ರಾಜೀವ್‌ಗೆ ಅಗ್ರಸ್ಥಾನ

ಜಿಆರ್‌ಒಎಚ್‌ಇ– ಹುರೂನ್‌ ಇಂಡಿಯಾ ವರದಿ ಬಿಡುಗಡೆ

ಪಿಟಿಐ
Published 11 ಜುಲೈ 2024, 16:09 IST
Last Updated 11 ಜುಲೈ 2024, 16:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಜಿಆರ್‌ಒಎಚ್‌ಇ– ಹುರೂನ್‌ ಇಂಡಿಯಾ ರಿಯಲ್‌ ಎಸ್ಟೇಟ್‌ ಸಂಸ್ಥೆ ಪ್ರಕಟಿಸಿರುವ ಪ್ರಸಕ್ತ ಸಾಲಿನ ಪ್ರಮುಖ 100 ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಟ್ಟಿಯಲ್ಲಿ ಡಿಎಲ್‌ಎಫ್‌ ಸಂಸ್ಥೆ ಅಧ್ಯಕ್ಷ ರಾಜೀವ್ ಸಿಂಗ್‌ ಅತಿಹೆಚ್ಚು ಸಂಪತ್ತು ಹೊಂದಿರುವ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಅವರ ಒಟ್ಟು ಸಂಪತ್ತು ₹1.24 ಲಕ್ಷ ಕೋಟಿ ಆಗಿದೆ.

ಮ್ಯಾಕ್ರೋಟೆಕ್‌ ಡೆವಲರ್ಪಸ್‌ ಸ್ಥಾಪಕ ಮಂಗಲ್‌ ಪ್ರಭಾತ್‌ ಲೋಧಾ ದ್ವಿತೀಯ ಹಾಗೂ ಗೌತಮ್‌ ಅದಾನಿ ಮೂರನೇ ಸ್ಥಾನ ಪಡೆದಿದ್ದಾರೆ. 

ಮಂಗಲ್‌ ಪ್ರಭಾತ್‌ ಲೋಧಾ ಮತ್ತು ಅವರ ಕುಟುಂಬ ₹91,700 ಕೋಟಿ, ಗೌತಮ್‌ ಅದಾನಿ ₹56,500 ಕೋಟಿ ಸಂಪತ್ತು ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಿಯಲ್‌ ಎಸ್ಟೇಟ್‌ನಲ್ಲಿ ಅದಾನಿ ಸಂಪತ್ತು ಶೇ 62ರಷ್ಟು ಹೆಚ್ಚಳವಾಗಿದೆ.

ADVERTISEMENT

ಒಬೆರಾಯ್‌ ರಿಯಲ್‌ ಎಸ್ಟೇಟ್‌ನ ವಿಕಾಸ್‌ ಒಬೆರಾಯ್‌ ₹44,820 ಕೋಟಿ‌ (ನಾಲ್ಕನೇ ಸ್ಥಾನ), ಕೆ. ರಹೇಜಾ ಸಮೂಹದ ಚಂದ್ರು ರಹೇಜಾ ಮತ್ತು ಅವರ ಕುಟುಂಬ ₹43,710 ಕೋಟಿ (ಐದನೇ ಸ್ಥಾನ), ಫೀನಿಕ್ಸ್‌ ಮಿಲ್ಸ್‌ನ ಅತುಲ್‌ ರುಯಾ ₹26,370 ಕೋಟಿ (ಆರನೇ ಸ್ಥಾನ), ಬಾಗ್‌ಮನೆ ಡೆವಲಪರ್ಸ್‌ನ ರಾಜಾ ಬಾಗ್‌ಮನೆ ₹19,650 ಕೋಟಿ (ಏಳನೇ ಸ್ಥಾನ) ಎಂಬೆಸಿ ಆಫೀಸ್‌ ಪಾರ್ಕ್‌ನ ಜಿತೇಂದ್ರ ವಿರ್ವಾನಿ ₹16 ಸಾವಿರ ಕೋಟಿ (8ನೇ ಸ್ಥಾನ) ಸಂಪತ್ತು ಹೊಂದಿದ್ದಾರೆ.

ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರಾಜೆಕ್ಸ್ಟ್‌ನ ಇರ್ಫಾನ್‌ ರಜಾಕ್‌, ರೆಜ್ವಾನ್‌ ರಜಾಕ್‌ ಮತ್ತು ನೋಮಾನ್‌ ರಜಾಕ್‌ 9ನೇ ಸ್ಥಾನದಲ್ಲಿದ್ದು, ತಲಾ ₹13,970 ಕೋಟಿ ಸಂಪತ್ತು ಹೊಂದಿದ್ದಾರೆ.

ಹೆಚ್ಚು ಮೌಲ್ಯ ಹೊಂದಿರುವ ಕಂಪನಿಗಳು:

ಕಂಪನಿಗಳ ಪಟ್ಟಿಯಲ್ಲಿ ಡಿಎಲ್‌ಎಫ್‌ ಮೊದಲ ಸ್ಥಾನದಲ್ಲಿದ್ದು ₹2 ಲಕ್ಷ ಕೋಟಿ ಮೌಲ್ಯ ಹೊಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೌಲ್ಯದಲ್ಲಿ ಶೇ 72ರಷ್ಟು ಬೆಳವಣಿಗೆ ಆಗಿದೆ. 

ಮ್ಯಾಕ್ರೋಟೆಕ್‌ ಡೆವಲಪರ್ಸ್‌ ₹1.4 ಲಕ್ಷ ಕೋಟಿ (ಎರಡನೇ ಸ್ಥಾನ), ತಾಜ್‌ ಸಮೂಹ ₹79,150 ಕೋಟಿ (ಮೂರನೇ ಸ್ಥಾನ), ಗೊದ್ರೇಜ್‌ ಸಮೂಹದ ಗೊದ್ರೇಜ್‌ ಪ್ರಾಪರ್ಟಿಸ್‌ ₹77,280 ಕೋಟಿ (ನಾಲ್ಕನೇ ಸ್ಥಾನ), ಒಬೆರಾಯ್‌ ರಿಯಲ್‌ ಎಸ್ಟೇಟ್‌ನ ವಿಕಾಸ್‌ ಒಬೆರಾಯ್‌ ₹66,200 ಕೋಟಿ (ಐದನೇ ಸ್ಥಾನ), ಪ್ರೆಸ್ಟೀಜ್‌ ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್ಸ್‌ ₹63,980 ಕೋಟಿ (ಆರನೇ ಸ್ಥಾನ), ಅದಾನಿ ಸಮೂಹದ ಅದಾನಿ ರಿಯಲ್‌ ಎಸ್ಟೇಟ್‌ ₹56,500 ಕೋಟಿ (ಏಳನೇ ಸ್ಥಾನ), ಫೀನಿಕ್ಸ್‌ ಮಿಲ್ಸ್‌ ₹55,740 ಕೋಟಿ (ಎಂಟನೇ ಸ್ಥಾನ), ಕೆ. ರಹೇಜಾ ಸಮೂಹ ₹55,300 ಕೋಟಿ (ಒಂಬತ್ತನೇ ಸ್ಥಾನ) ಮತ್ತು ಎಂಬೆಸಿ ಆಫೀಸ್‌ ಪಾರ್ಕ್ಸ್‌ ₹33,150 ಕೋಟಿ ಮೌಲ್ಯ ಹೊಂದುವ ಮೂಲಕ ಹತ್ತನೇ ಕಂಪನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.