ADVERTISEMENT

ಭಾನುವಾರ ಒಂದೇ ದಿನ 4.71 ಲಕ್ಷ ಮಂದಿ ವಿಮಾನದಲ್ಲಿ ಸಂಚಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 13:38 IST
Last Updated 22 ಏಪ್ರಿಲ್ 2024, 13:38 IST
..........
..........   

ನವದೆಹಲಿ: ದೇಶೀಯ ಮಾರ್ಗದಲ್ಲಿ ಭಾನುವಾರದಂದು 6,128 ವಿಮಾನಗಳು ಹಾರಾಟ ನಡೆಸಿದ್ದು, ಒಟ್ಟು 4,71,751 ಪ್ರಯಾಣಿಕರು ಸಂಚರಿಸಿದ್ದಾರೆ. ಇಷ್ಟು ಮಂದಿ ಒಂದು ದಿನದಲ್ಲಿ ಪ್ರಯಾಣಿಸಿರುವುದು ದಾಖಲೆಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿದೆ. 

ಕೋವಿಡ್‌ ಪೂರ್ವದಲ್ಲಿ ದಿನವೊಂದಕ್ಕೆ ಸರಾಸರಿ 3,98,598 ಮಂದಿ ಪ್ರಯಾಣಿಸಿದ್ದರು. ಇದಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 14ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷದ ಏಪ್ರಿಲ್‌ 21ರಂದು 5,899 ವಿಮಾನಗಳು ಹಾರಾಟ ನಡೆಸಿದ್ದು, 4,28,389 ಪ್ರಯಾಣಿಕರು ಸಂಚರಿಸಿದ್ದರು. ಪ್ರತಿದಿನವೂ ದೇಶೀಯ ವಿಮಾನಯಾನ ವಲಯದ ಬೆಳವಣಿಗೆಯು ಹೊಸ ಎತ್ತರಕ್ಕೆ ತಲುಪುತ್ತಿದೆ ಎಂದು ಸಚಿವಾಲಯವು ‘ಎಕ್ಸ್‌’ನಲ್ಲಿ ತಿಳಿಸಿದೆ.

ADVERTISEMENT

‘ಭಾರತದಲ್ಲಿ ದೇಶೀಯ ವಿಮಾನಯಾನ ವಲಯವು ಅಭೂತಪೂರ್ವ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಸದೃಢ ನೀತಿಗಳು, ಆರ್ಥಿಕತೆ ಪ್ರಗತಿ ಹಾಗೂ ಕಡಿಮೆ ಪ್ರಯಾಣ ದರವು ಇದಕ್ಕೆ ನೆರವಾಗಿದೆ. ಹೆಚ್ಚು ಜನರಿಗೆ ವಿಮಾನ ಸೇವೆ ದೊರೆಯುತ್ತಿದೆ. ಹಾಗಾಗಿ, ಈ ವಲಯವು ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.