ADVERTISEMENT

ಒಣ ಮೆಣಸಿನಕಾಯಿ ಮೇಳ: ₹72 ಲಕ್ಷ ವಹಿವಾಟು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಒಣಮೆಣಸಿನಕಾಯಿ
ಒಣಮೆಣಸಿನಕಾಯಿ   

ಹುಬ್ಬಳ್ಳಿ: ನಗರದಲ್ಲಿ ಆರಂಭಗೊಂಡ ಒಣಮೆಣಸಿನಕಾಯಿ ಮೇಳದ ಎರಡನೇ ದಿನದಂದು ₹ 72 ಲಕ್ಷ ಮೌಲ್ಯದ ಒಟ್ಟು 160 ಕ್ವಿಂಟಲ್ ಮೆಣಸಿನಕಾಯಿ ಮಾರಾಟವಾಯಿತು.

ಧಾರವಾಡ ಜಿಲ್ಲೆಯಲ್ಲದೇ, ಗದಗ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಭಾಗದ ರೈತರು ವ್ಯಾಪಾರ ನಡೆಸಿದರು. ಧಾರವಾಡ ಜಿಲ್ಲೆ ಸೇರಿ ಹಾವೇರಿ, ಉತ್ತರ ಕನ್ನಡ ಜಿಲ್ಲೆಯ ಗ್ರಾಹಕರು ಖರೀದಿಸಿದರು.

‘ಈ ವರ್ಷ ಉತ್ತಮ ವಹಿವಾಟು ನಡೆದಿದೆ. ಬ್ಯಾಡಗಿ ಮೆಣಸಿಕಾಯಿಗೆ ಬೇಡಿಕೆ ಹೆಚ್ಚಿದೆ. ಕನಿಷ್ಠ ₹300 ರಿಂದ ₹700ರವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಮೂರು ದಿನಗಳಲ್ಲಿ ₹1.10 ಕೋಟಿ ವಹಿವಾಟು ಆಗಿತ್ತು. ಈ ವರ್ಷ ದಾಖಲೆಯ ವ್ಯವಹಾರ ನಡೆಯುವ ಸಾಧ್ಯತೆ ಇದೆ’ ಎಂದು ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ಸಿದ್ದರಾಮಯ್ಯ ಬರಗಿಮಠ ತಿಳಿಸಿದರು.

ADVERTISEMENT

ಕರ್ನಾಟಕ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಮೇಳವು ಭಾನುವಾರ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.