ADVERTISEMENT

ಇ–ಕಾಮರ್ಸ್‌ ಹಬ್ಬದ ಮಾರಾಟ ಮೌಲ್ಯ ₹ 22,630 ಕೋಟಿ

ಪಿಟಿಐ
Published 21 ಅಕ್ಟೋಬರ್ 2020, 17:04 IST
Last Updated 21 ಅಕ್ಟೋಬರ್ 2020, 17:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇ–ಕಾಮರ್ಸ್‌ ಕಂಪನಿಗಳು ಹಬ್ಬದ ಅವಧಿಯಲ್ಲಿ ₹ 22,630 ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿವೆ ಎಂದು ರೆಡ್‌ಸೀರ್‌ ಕನ್ಸಲ್ಟಿಂಗ್‌ ಕಂಪನಿ ಹೇಳಿದೆ.

ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಸ್ನ್ಯಾಪ್‌ಡೀಲ್‌ ಕಂಪನಿಗಳು ₹ 29,200 ಕೋಟಿ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಲಿವೆ ಎಂದು ರೆಡ್‌ಸೀರ್ ಅಂದಾಜು ಮಾಡಿತ್ತು. ಅದಕ್ಕೆ ಹೋಲಿಸಿದರೆ ಶೇ 77ರಷ್ಟು ಪ್ರಮಾಣದ ಮಾರಾಟ ನಡೆದಿದೆ.

ಅಕ್ಟೋಬರ್ 15ರಿಂದ 19ರವರೆಗಿನ ಅವಧಿಯಲ್ಲಿ ಇ–ಕಾಮರ್ಸ್‌ ಕಂಪನಿಗಳು ಹಬ್ಬದ ಮಾರಾಟ ನಡೆಸಿವೆ. ನಿರ್ಮಾಣ ವಸ್ತುಗಳು ಹಾಗೂ ಮೊಬೈಲ್‌ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಎರಡನೇ ಶ್ರೇಣಿಯ ನಗರಗಳಲ್ಲಿ ಖರೀದಿ ಹೆಚ್ಚಾಗಿದೆ ಎಂದು ಹೇಳಿದೆ.

ADVERTISEMENT

ಮೊದಲ 48 ಗಂಟೆಗಳಲ್ಲಿ 1.1 ಲಕ್ಷ ಮಾರಾಟಗಾರರು ಆರ್ಡರ್‌ ಪಡೆದಿದ್ದಾರೆ ಎಂದು ಅಮೆಜಾನ್‌ ಇಂಡಿಯಾ ಹೇಳಿರುವುದಾಗಿ ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.