ನವದೆಹಲಿ: ಇ–ಕಾಮರ್ಸ್ ವಲಯದ ಕಂಪನಿಗಳು ಹಬ್ಬದ ಋತುವಿನ ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದಷ್ಟು ಮಾರಾಟ ನಡೆಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ 19ರಷ್ಟು ಹೆಚ್ಚಳ ಆಗಿದೆ ಎಂದು ಸಂಶೋಧನಾ ಸಂಸ್ಥೆ ರೆಡ್‌ಶೀರ್ ಸ್ಟ್ರ್ಯಾಟಜಿ ಕನ್ಸಲ್ಟಂಟ್ಸ್ ತಿಳಿಸಿದೆ.
ಅಕ್ಟೋಬರ್ 15ಕ್ಕೆ ಕೊನೆಗೊಂಡ ಹಬ್ಬದ ಮಾರಾಟದ ಮೊದಲ ವಾರದಲ್ಲಿ, ಫ್ಲಿಪ್‌ಕಾರ್ಟ್ ಸಮೂಹವು (ಫ್ಲಿಪ್‌ಕಾರ್ಟ್, ಮಿಂತ್ರಾ, ಶಾಪ್ಸಿ) ₹29,610 ಕೋಟಿ ಮೌಲ್ಯದ ವಹಿವಾಟು ನಡೆಸಿದೆ. ಈ ಮೂಲಕ ಒಟ್ಟು ಮಾರಾಟದಲ್ಲಿ ಶೇ 63ರಷ್ಟು ಪಾಲು ಹೊಂದಿದೆ.
ಮೊದಲ ವಾರದ ವಹಿವಾಟಿನಲ್ಲಿ ಆಗಿರುವ ಒಟ್ಟು ಮಾರಾಟದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ರೆಫ್ರಿಜರೇಟರ್, ಗ್ರೈಂಡರ್, ವಾಷಿಂಗ್ ಮಷಿನ್ ತರಹದ ಉಪಕರಣಗಳ ಪಾಲೇ ಶೇ 67ರಷ್ಟು ಗರಿಷ್ಠ ಪ್ರಮಾಣದಲ್ಲಿ ಇದೆ ಎಂದು ಅದು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.