ADVERTISEMENT

ಭಾರತದಲ್ಲಿ ಚಲಾವಣೆಯಲ್ಲಿರುವ ಡಿಜಿಟಲ್‌ ಕರೆನ್ಸಿ ಪ್ರಮಾಣ ಎಷ್ಟು? ಇಲ್ಲಿದೆ ಮಾಹಿತಿ

ಪಿಟಿಐ
Published 13 ಮಾರ್ಚ್ 2023, 13:34 IST
Last Updated 13 ಮಾರ್ಚ್ 2023, 13:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ ಡಿಜಿಟಲ್‌ ಅಥವಾ ಇ–ರುಪಿಯ ಪ್ರಾಯೋಗಿಕ ಬಳಕೆ ಆರಂಭ ಆಗಿದ್ದು, ಫೆಬ್ರುವರಿ 28ರವರೆಗೆ ಒಟ್ಟು ₹ 130 ಕೋಟಿ ಮೌಲ್ಯದ ಡಿಜಿಟಲ್‌ ಕರೆನ್ಸಿ ಚಲಾವಣೆಯಲ್ಲಿ ಇದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ತಿಳಿಸಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2022ರ ನವೆಂಬರ್ 1ರಿಂದ ಡಿಜಿಟಲ್‌ ರೂಪಾಯಿಯನ್ನು ಸಗಟು ವಹಿವಾಟು ವಿಭಾಗದಲ್ಲಿ ಬಿಡುಗಡೆ ಮಾಡಿದೆ. 2022ರ ಡಿಸೆಂಬರ್ 1ರಿಂದ ಚಿಲ್ಲರೆ ವಹಿವಾಟು ವಿಭಾಗದಲ್ಲಿ ಬಿಡುಗಡೆ ಮಾಡಿದೆ.

‘ಚಿಲ್ಲರೆ ವಹಿವಾಟು ವಿಭಾಗದಲ್ಲಿ ₹ 4.14 ಕೋಟಿ ಮತ್ತು ಸಗಟು ವಹಿವಾಟು ವಿಭಾಗದಲ್ಲಿ ₹ 126.27 ಕೋಟಿ ಮೊತ್ತದ ಡಿಜಿಟಲ್‌ ರೂಪಾಯಿ ಚಲಾವಣೆಯಲ್ಲಿ ಇದೆ’ ಎಂದು ನಿರ್ಮಲಾ ಹೇಳಿದ್ದಾರೆ.

ADVERTISEMENT

‘ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಯೆಸ್‌ ಬ್ಯಾಂಕ್‌, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್‌ಗಳು ಡಿಜಿಟಲ್‌ ರೂಪಾಯಿಯ ಸಗಟು ವಹಿವಾಟಿನಲ್ಲಿ ಭಾಗಿಯಾಗಿವೆ’ ಎಂದು ನಿರ್ಮಲಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.