ನವದೆಹಲಿ: ಅಡುಗೆ ಎಣ್ಣೆಗಳ ಆಮದು ಜುಲೈನಲ್ಲಿ ಶೇಕಡ 31ರಷ್ಟು ಹೆಚ್ಚಾಗಿದ್ದು 12.05 ಲಕ್ಷ ಟನ್‌ಗೆ ತಲುಪಿದೆ. ಹಿಂದಿನ ವರ್ಷದ ಜುಲೈನಲ್ಲಿ ಅಡುಗೆ ಎಣ್ಣೆಗಳ ಆಮದು ಪ್ರಮಾಣವು 9.17 ಲಕ್ಷ ಟನ್ ಇತ್ತು.
ಜೂನ್‌ನಿಂದ ಜಾಗತಿಕ ಮಾರುಕಟ್ಟೆಯಲ್ಲಿ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಬೆಲೆಯು ಇಳಿಕೆ ಕಂಡಿದೆ. ಹೀಗಾಗಿ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಂಡಿದೆ ಎಂದು ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎ) ಶುಕ್ರವಾರ ತಿಳಿಸಿದೆ.
2021ರ ನವೆಂಬರ್‌ನಿಂದ 2022ರ ಜುಲೈ ಅವಧಿಯಲ್ಲಿ ಅಡುಗೆ ಎಣ್ಣೆಗಳ ಆಮದು 96.95 ಲಕ್ಷ ಟನ್‌ಗೆ ತಲುಪಿದೆ. ಹಿಂದಿನ ಅವಧಿಯಲ್ಲಿ 93.70 ಲಕ್ಷ ಟನ್‌ಗಳಷ್ಟು ಇತ್ತು.
ಒಟ್ಟಾರೆ ಆಮದಿನಲ್ಲಿ ಸಂಸ್ಕರಿಸಿದ ತಾಳೆ ಎಣ್ಣೆ ಪಾಲು 11.44 ಲಕ್ಷ ಟನ್, ಕಚ್ಚಾ ತಾಳೆ ಎಣ್ಣೆ ಪಾಲು 36.59 ಲಕ್ಷ ಟನ್, ಕಚ್ಚಾ ಸೊಯಾಬೀನ್ ಎಣ್ಣೆ 33.30 ಲಕ್ಷ ಟನ್ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆ 15.03 ಲಕ್ಷ ಟನ್ ಆಗಿದೆ.
ಇಂಡೊನೇಷ್ಯಾ ಮತ್ತು ಮಲೇಷ್ಯಾ, ಭಾರತಕ್ಕೆ ತಾಳೆ ಎಣ್ಣೆ ಪೂರೈಸುವ ಪ್ರಮುಖ ದೇಶಗಳು. ರಷ್ಯಾ, ಉಕ್ರೇನ್ ಮತ್ತು ಅರ್ಜೆಂಟೀನಾ ದೇಶಗಳಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಹೆಚ್ಚಿನ ಪ್ರಮಾಣದಲ್ಲಿ ಆಮದಾಗುತ್ತಿದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾ ದೇಶಗಳು ಸೊಯಾಬೀನ್ ಎಣ್ಣೆ ಪೂರೈಸುತ್ತಿವೆ.
ಅಡುಗೆ ಎಣ್ಣೆ ದಾಸ್ತಾನು (ಲಕ್ಷ ಟನ್‌ಗಳಲ್ಲಿ)
22.56 ಜುಲೈ 1ರ ಅಂತ್ಯಕ್ಕೆ
23.04 ಆಗಸ್ಟ್ 1ರ ಅಂತ್ಯಕ್ಕೆ
48 ಸಾವಿರ ಟನ್ ಏರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.