ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್‌ನಿಂದ (ಇಎಲ್‌ಸಿಐಎ) ಜುಲೈ 26ರಂದು ‘ಇಎಲ್‌ಸಿಐಎ ಟೆಕ್ ಶೃಂಗಸಭೆ’ ಆಯೋಜಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯ ದಿ ಒಟೆರಾ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಬಗ್ಗೆ ಉದ್ದಿಮೆದಾರರು ತಮ್ಮ ಅನುಭವ ಹಂಚಿಕೊಳ್ಳಲು ಈ ಶೃಂಗಸಭೆಯು ವೇದಿಕೆ ಕಲ್ಪಿಸಲಿದೆ ಎಂದು ಅಸೋಸಿಯೇಷನ್ ತಿಳಿಸಿದೆ.
ಜಗತ್ತಿನಲ್ಲಿರುವ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆಯೂ ಉದ್ದಿಮೆದಾರರು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ನಾವೀನ್ಯ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡಲು ಇದು ವೇದಿಕೆಯಾಗಿದೆ ಎಂದು ಹೇಳಿದೆ.
‘ಉದ್ಯಮ ವಲಯದಲ್ಲಿನ ಹೊಸ ಅನ್ವೇಷಣೆ, ಸಹಭಾಗಿತ್ವ ಹಾಗೂ ಸಹಕಾರಕ್ಕೆ ಈ ಶೃಂಗಸಭೆಯು ವೇದಿಕೆ ಕಲ್ಪಿಸಲಿದ್ದು, ಟೆಕ್ ವಲಯದಲ್ಲಿ ಹೊಸ ಹೆಗ್ಗುರುತು ಮೂಡಿಸಲಿದೆ’ ಎಂದು ಇಎಲ್‌ಸಿಐಎ ಅಧ್ಯಕ್ಷ ಶ್ರೀರಾಮ್ ಕುಮಾರ್ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಮೂಲ ಸೌಕರ್ಯ ನಿರ್ವಹಣೆಗೆ ಸಂಬಂಧಿಸಿದ ಕಳೆದ ಎರಡು ದಶಕದಿಂದಲೂ ಈ ಅಸೋಸಿಯೇಷನ್ ಕಾರ್ಯ ನಿರ್ವಹಿಸುತ್ತಿದೆ.
ಶೃಂಗಸಭೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.elciatechsummit.in ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.