ನವದೆಹಲಿ: ಬುಧವಾರದಿಂದಲೇ ಜಾರಿಗೆ ಬರುವಂತೆ ವಿದ್ಯುತ್ ಚಾಲಿತ ವಾಹನಗಳ ಬಿಡಿಭಾಗಗಳ ಮೇಲಿನಮದು ಸುಂಕವನ್ನು ತಗ್ಗಿಸಲಾಗಿದೆ. ಶೇ 15 ರಿಂದ ಶೇ 30ರವರೆಗಿದ್ದ ಸುಂಕವು ಶೇ 10 ರಿಂದ ಶೇ 15ಕ್ಕೆ ಇಳಿಕೆಯಾಗಿದೆ.
ದೇಶದಲ್ಲಿಯೇ ವಾಹನಗಳ ಬಿಡಿಭಾಗಗಳ ಜೋಡಣೆ ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇ–ವಾಹನಗಳ ಬ್ಯಾಟರಿ ಪ್ಯಾಕ್‌ಗಳ ಮೇಲಿನ ಆಮದು ಸುಂಕದಿಂದ ವಿನಾಯ್ತಿ ನೀಡಲಾಗಿದೆ. ಶೇ 5ರಷ್ಟು ಸುಂಕ ಇತ್ತು.ಮೊಬೈಲ್ ಫೋನ್‌ಗಳ ಬ್ಯಾಟರಿ ಪ್ಯಾಕ್‌ಗಳ ಸುಂಕವನ್ನು ಶೇ 10 ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.