ಟೆಸ್ಲಾ ಸಿಇಒ ಎಲೊನ್ ಮಸ್ಕ್ ಅವರು ಟ್ವಿಟರ್ ಇಂಕ್‌ನಲ್ಲಿ ಶೇ 9.2ರಷ್ಟು ಹೂಡಿಕೆ ಪಾಲು ಹೊಂದಿದ್ದಾರೆ.
ಸೋಮವಾರ ಅವರು ಫೈಲ್ ಮಾಡಿರುವ ಹೂಡಿಕೆ ವಿವರದಲ್ಲಿ ಈ ವಿಚಾರ ಬಹಿರಂಗವಾಗಿದೆ. ಅದರ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ವಹಿವಾಟು ಆರಂಭಕ್ಕೆ ಮುನ್ನವೇ, ಟ್ವಿಟರ್ ಷೇರುಗಳು ಶೇ 16ರಷ್ಟು ಏರಿಕೆ ದಾಖಲಿಸಿವೆ.
ಕಳೆದ ತಿಂಗಳು, ಎಲೊನ್ ಮಸ್ಕ್ ಅವರು, ಹೊಸತೊಂದು ಸಾಮಾಜಿಕ ತಾಣವನ್ನು ಅಭಿವೃದ್ಧಿಪಡಿಸುವ ಕುರಿತು ಚಿಂತನೆ ಹೊಂದಿರುವುದಾಗಿ ಹೇಳಿಕೆ ನೀಡಿದ್ದರು.
ಹೊಸ ಸಾಮಾಜಿಕ ಜಾಲತಾಣ ವೇದಿಕೆ ಕುರಿತು ಟ್ವಿಟರ್ ಬಳಕೆದಾರರೊಬ್ಬರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದರು.
ಟ್ವಿಟರ್‌ನ ಪ್ರಮುಖ ಬಳಕೆದಾರರೂ ಆಗಿರುವ ಎಲೊನ್ ಮಸ್ಕ್, ಸಾಮಾಜಿಕ ತಾಣಗಳಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಕುರಿತಾದ ಪಾಲಿಸಿಗಳನ್ನು ಜಾರಿಮಾಡಲು ಕಂಪನಿಗಳು ಕ್ರಮ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.