ADVERTISEMENT

ಸುಗಂಧ ದ್ರವ್ಯ ಪರಿಚಯಿಸಿದ ಎಲಾನ್ ಮಸ್ಕ್: ಬೆಲೆ ₹8,400!

ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹೊಸ ಸಾಹಸ‌ | ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ

ಏಜೆನ್ಸೀಸ್
Published 13 ಅಕ್ಟೋಬರ್ 2022, 11:23 IST
Last Updated 13 ಅಕ್ಟೋಬರ್ 2022, 11:23 IST
   

ಸ್ಯಾನ್‌ ಫ್ರಾನ್ಸಿಸ್ಕೊ: ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್, ‘ಬರ್ನ್ ಹೇರ್‘ ಎನ್ನುವ ಹೊಸ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ನೂತನ ಸುಗಂಧ ದ್ರವ್ಯದ ಕುರಿತು ಟ್ವಿಟರ್‌ನಲ್ಲಿ ತಮಾಷೆಯಾಗಿ ಪೋಸ್ಟ್ ಮಾಡಿರುವ ಎಲಾನ್ ಮಸ್ಕ್, ದಯವಿಟ್ಟು ನನ್ನ ಪರ್ಫ್ಯೂಮ್ ಖರೀದಿಸಿ.. ಹಾಗಾದರೆ ನಾನು ಟ್ವಿಟರ್ ಅನ್ನು ಖರೀದಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಮಸ್ಕ್ ಒಡೆತನದ ಬೋರಿಂಗ್ ಕಂಪನಿ ಪರಿಚಯಿಸಿರುವ ಬರ್ನ್ ಹೇರ್ ಬ್ರ್ಯಾಂಡ್‌ನ ಸುಗಂಧ ದ್ರವ್ಯ, ದೇಶದಲ್ಲಿ ₹8,400 ದರ ಹೊಂದಿದೆ. ಆನ್‌ಲೈನ್ ಮೂಲಕ ಖರೀದಿಸಬಹುದಾಗಿದೆ.

ADVERTISEMENT

ಭೂಮಿಯಲ್ಲಿ ಲಭ್ಯವಿರುವ ಅತ್ಯುತ್ತಮ ಸುಗಂಧ ದ್ರವ್ಯ ಇದು ಎಂದು ಮಸ್ಕ್ ಹೇಳಿದ್ದಾರೆ.

ಈಗಾಗಲೇ 20,000ಕ್ಕೂ ಅಧಿಕ ಬಾಟಲಿ ಸುಗಂಧ ದ್ರವ್ಯ ಮಾರಾಟವಾಗಿದೆ ಎಂದು ಮಸ್ಕ್ ತಿಳಿಸಿದ್ದಾರೆ.

ಎಲಾನ್ ಮಸ್ಕ್ ಟ್ವಿಟರ್ ಖರೀದಿಗೆ ಮತ್ತೆ ಉತ್ಸುಕರಾಗಿದ್ದಾರೆ. ಈ ಕುರಿತಂತೆ ಪ್ರಕ್ರಿಯೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.