ಎಲೆಕ್ಟ್ರಿಕ್ ಕಾರು ತಯಾರಿಕ ಸಂಸ್ಥೆ ಟೆಸ್ಲಾ ಖ್ಯಾತಿಯ ಎಲಾನ್ ಮಸ್ಕ್, ಟೆಸ್ಲಾದ 44 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರುಗಳ ಮಾರುಕಟ್ಟೆ ಮೌಲ್ಯ $3.99 ಬಿಲಿಯನ್ (ಅಂದಾಜು ₹30,536.79 ಕೋಟಿ) ಇದೆ.
ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಕಳೆದ ವಾರ 44 ಬಿಲಿಯನ್ ಡಾಲರ್ (ಸುಮಾರು ₹3.36 ಲಕ್ಷ ಕೋಟಿ)ಗೆ ಖರೀದಿಸಿದ್ದ ಎಲಾನ್ ಮಸ್ಕ್ ಅವರಿಗೆ ಟೆಸ್ಲಾ ಷೇರು ಮಾರಾಟದಿಂದ ಹಣಕಾಸಿನ ನೆರವು ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಗುರುವಾರ ಟೆಸ್ಲಾದ ಷೇರು ಮಾರಾಟದ ಬಳಿಕ ಮುಂದೆ ಷೇರು ಮಾರಾಟ ಮಾಡುವ ಚಿಂತನೆ ಇಲ್ಲ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ಟೆಸ್ಲಾ ಷೇರಿನ ಮೌಲ್ಯ ಇಳಿಕೆ ಕಂಡುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.