ADVERTISEMENT

ನಿಯಮ ಪಾಲಿಸಿದರಷ್ಟೇ ಸ್ಟಾರ್‌ಲಿಂಕ್‌ಗೆ ‍ಪರವಾನಗಿ: ಸಿಂಧಿಯಾ

ಪಿಟಿಐ
Published 12 ನವೆಂಬರ್ 2024, 16:05 IST
Last Updated 12 ನವೆಂಬರ್ 2024, 16:05 IST
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ   

ನವದೆಹಲಿ: ‘ದೇಶದ ಭದ್ರತೆ ಹಾಗೂ ದೂರಸಂಪರ್ಕ ಸೇವೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಪಾಲನೆ ಮಾಡಿದರಷ್ಟೇ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ಒದಗಿಸಲು ಸ್ಟಾರ್‌ಲಿಂಕ್‌ನ ಕಾರ್ಯಾಚರಣೆಗೆ ಸರ್ಕಾರ ಪರವಾನಗಿ ನೀಡಲಿದೆ’ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದಲ್ಲಿ ಪರವಾನಗಿ ಪಡೆಯಲು ಟೆಸ್ಲಾ ಮುಖ್ಯಸ್ಥ ಇಲಾನ್‌ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ ಹಲವು ವರ್ಷದಿಂದ ಪ್ರಯತ್ನಿಸುತ್ತಿದೆ. ಉಪಗ್ರಹ ಆಧಾರಿತ ಜಾಗತಿಕ ಮೊಬೈಲ್ ಸಂವಹನಕ್ಕಾಗಿ ಪರವಾನಗಿ ಕೋರಿ 2022ರ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದೆ. ಅಲ್ಲದೆ, ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಕಂಪನಿಯು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರಕ್ಕೂ ಅರ್ಜಿ ಸಲ್ಲಿಸಿದೆ’ ಎಂದರು.

‘ಸದ್ಯ ಈ ಅರ್ಜಿಗಳ ಪರಿಶೀಲನೆಯು ಪ್ರಗತಿಯಲ್ಲಿದೆ’ ಎಂದರು.

ADVERTISEMENT

2025ರಿಂದ ಹೊಸ ನಿಯಮ:

2025ರ ಏಪ್ರಿಲ್‌ನಿಂದ ತಳಮಟ್ಟದಲ್ಲಿ ಗ್ರಾಹಕರಿಗೆ ಗುಣಮಟ್ಟದ ದೂರಸಂಪರ್ಕ ಸೇವೆ ಒದಗಿಸುವ ಸಂಬಂಧ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ನಿಯಮಾವಳಿ ಅನ್ವಯ ಟೆಲಿಕಾಂ ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿ ಸೇವೆಯ ನೆಟ್‌ವರ್ಕ್‌ಗಳ ನಕ್ಷೆ ಬಗ್ಗೆ ಪ್ರದರ್ಶಿಸಬೇಕಿದೆ. ಈ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.